ದೆಹಲಿ ಗದ್ದುಗೆ ಗುದ್ದಾಟಕ್ಕೆ ಮುಹೂರ್ತ ಫಿಕ್ಸ್..!

ಡಿಜಿಟಲ್ ಕನ್ನಡ ಟೀಮ್:

ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು, ಫೆಬ್ರವರಿ 8 ರಂದು ಚುನಾವಣೆ ನಡೆಯಲಿದೆ. ಚುನಾವಣಾ ಫಲಿತಾಂಶ ಫೆಬ್ರವರಿ11 ರಂದು ಹೊರ ಬೀಳಲಿದೆ.

ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗುತ್ತಿದ್ದು, ಭದ್ರತೆಗೆ 90,000 ಪೊಲೀಸರ ನಿಯೋಜನೆ ಮಾಡಲಾಗ್ತಿದೆ. 13,750 ಮತಗಟ್ಟೆಗಳ ನಿರ್ಮಾಣ ಮಾಡಲಿದ್ದು, 1 ಕೋಟಿ 46 ಲಕ್ಷ 92 ಸಾವಿರದ 136 ಮತದಾರರು ದೆಹಲಿ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ.

ಜನವರಿ 21 ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದ್ದು, ನಾಮಪತ್ರ ವಾಪಸ್ ಪಡೆಯಲು ಜನವರಿ 24 ಅಂತಿಮ ದಿನವಾಗಿದೆ. ಕಳೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರಾಬಲ್ಯ ಮೆರೆದಿದ್ದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ, ಬರೋಬ್ಬರಿ 70 ವಿಧಾನಸಭಾ ಕ್ಷೇತ್ರಗಳ ಪೈಕಿ, 67 ಕ್ಷೇತ್ರಗಳನ್ನು ಗೆದ್ದು ಬೀಗಿತ್ತು. ಕೇವಲ ಓರ್ವ ಸರ್ಕಾರಿ ಅಧಿಕಾರಿಯಾಗಿದ್ದ ಅರವಿಂದ್ ಕೇಜ್ರಿವಾಜ್ ಅಂದಿನ ಯುಪಿಎ ಸರ್ಕಾರದ ವಿರುದ್ಧ ನಡೆದ ಹೋರಾಟದಲ್ಲಿ ಕಾಣಿಸಿಕೊಂಡು ಚುನಾವಣೆಯಲ್ಲಿ ಭರ್ಜರಿ ಜನಮನ್ನಣೆ ಗಳಿಸಿದ್ರು.

ಫೆಬ್ರವರಿ 22, 2020ಕ್ಕೆ ದೆಹಲಿ ಸರ್ಕಾರದ ಅವಧಿ ಮುಕ್ತಾಯ ಆಗುತ್ತಿದ್ದು ಅಷ್ಟರೊಳಗಾಗಿ ಚುನಾವಣೆ ನಡೆಸಿ ಹೊಸ ಸರ್ಕಾರ ರಚನೆ ಆಗಬೇಕಿದೆ.

Leave a Reply