ಜಮೀರ್ ಸವಾಲಿಗೆ ಸೋಮಶೇಖರ್ ರೆಡ್ಡಿ ಆಹ್ವಾನ!

ಡಿಜಿಟಲ್ ಕನ್ನಡ ಟೀಮ್:

ಸಿಎಎ ವಿರೋಧಿಸಿದ ಮುಸಲ್ಮಾನರ ವಿರುದ್ಧ ವಿವಾದದ ಹೇಳಿಕೆ ನೀಡಿದ್ದ ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ನಡುವೆ ವಾಕ್ಸಮರ ನಡೆಯುತ್ತಿದೆ.

ರೆಡ್ಡಿ ಹೇಳಿಕೆ ಖಂಡಿಸಿ ಪ್ರತಿಕ್ರಿಯೆ ನೀಡಿರುವ ಜಮೀರ್, ನಾನು ಬಳ್ಳಾರಿಗೆ ಆಗಮಿಸುತ್ತೇನೆ ಏನು ಮಾಡುತ್ತೀರಿ ನೋಡುತ್ತೇನೆ ಎಂದು ಸವಾಲು ಹಾಕಿದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೋಮಶೇಖರ್ ರೆಡ್ಡಿ, ಬಳ್ಳಾರಿಗೆ ಬಂದಾಗ ನನ್ನ ಮನೆಗೆ ಬಂದು ಟಿಫಿನ್ ಮಾಡಿಕೊಂಡು ಹೋಗಿ ಎಂದು ಆಹ್ವಾನ ನೀಡಿದ್ದಾರೆ.

ಇನ್ನು ತಮ್ಮ ಹೇಳಿಕೆಗೆ ಈಗಲೂ ಬದ್ಧ ಎಂದಿರುವ ರೆಡ್ಡಿ, ತಾವು ಈ ವಿಚಾರದಲ್ಲಿ ಕ್ಷಮೆ ಕೋರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply