ಭಾರತ್ ಬಂದ್ ಮಾಡ್ತಿರೋದ್ಯಾಕೆ..? ಬಂದ್ ನಿಂದ ಸಮಸ್ಯೆ ಇದ್ಯಾ?

ಡಿಜಿಟಲ್ ಕನ್ನಡ ಟೀಮ್:

ನಾಳೆ ಭಾರತ್ ಬಂದ್ ಮಾಡಲು ವಿವಿಧ ಸಂಘಟನೆಗಳು ಕರೆ ಕೊಟ್ಟಿವೆ. ಆದ್ರೆ ಬಂದ್‌ ಮಾಡಲು ಹಲವು ಸಂಘಟನೆಗಳು ಬಂದ್ ಮಾಡಲು ನಿರಾಕರಿಸಿವೆ. ನೈತಿಕ ಬೆಂಬಲವನ್ನು ಮಾತ್ರ ನೀಡಲು ನಿರ್ಧಾರ ಕೈಗೊಂಡಿವೆ. ಹೀಗಾಗಿ ನಾಳಿನ ಬಂದ್ ಮುಷ್ಕರ ರೀತಿ ಇರಲಿದ್ದು ಜನಜೀವನದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ.

ಬೆಂಗಳೂರು ನಗರದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಳ್ಳಲು ಮುಂದಾಗಿದ್ದು, ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆ ಮಾಡಲು ಅವಕಾಶ ಕೊಡಲಾಗಿದೆ.

ಫ್ರೀಡಂಪಾರ್ಕ್ ಬಳಿ ಓರ್ವ ಡಿಸಿಪಿ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲು ನಿರ್ಧಾರ ಮಾಡಲಾಗಿದೆ. ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್, ಎಸಿಪಿ , ಇನ್ಸ್‌ಪೆಕ್ಟರ್ , ಪಿಎಸ್‌ಐ , ಎಎಸ್‌ಐ , ಕೆಎಸ್‌ಆರ್‌ಪಿ ಸೇರಿದಂತೆ ಸುಮಾರು ಐದು ನೂರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅಗತ್ಯಬಿದ್ರೆ ಕೇಂದ್ರ ವಿಭಾಗದಲ್ಲಿ ಡಿಸಿಪಿ ಚೇತನ್ ಸಿಂಗ್ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗುತ್ತದೆ.

ಟೌನ್‌ಹಾಲ್‌ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಕೊಟ್ಟಿಲ್ಲ. ಜೊತೆಗೆ ವಿಧಾನಸೌಧ, ರಾಜಭವನಕ್ಕೂ ಹೆಚ್ಚಿನ ಭದ್ರತೆ ಕೊಲಾಗುವುದು. ಉಳಿದಂತೆ ಮೆಜೆಸ್ಟಿಕ್, ಮೆಟ್ರೋ ನಿಲ್ದಾಣ, ಬಸ್ ಡಿಪೋಗಳಿಗೂ ಭದ್ರತೆ ಕೊಡಲಾಗಿದೆ. ಮೆಡಿಕಲ್ ಅಸೋಸಿಯೇಷನ್ ಬಂದ್‌ನಿಂದ ದೂರ ಉಳಿದಿದ್ದು, ಎಂದಿನಂತೆ ಕಾರ್ಯ ನಿರ್ವಹಿಸಲಿವೆ. PHANA ಹಾಗೂ IMA ಬಂದ್‌ಗೆ ಬೆಂಬಲ ಇಲ್ಲ ಎಂದಿದೆ. ಹೀಗಾಗಿ ನಾಳೆ ಯಾವುದೇ ಖಾಸಗಿ ಆಸ್ಪತ್ರೆ ಬಂದ್ ಆಗುವುದಿಲ್ಲ. ಆದ್ರೆ ಬಂದ್‌ಗೆ ನೈತಿಕ ಬೆಂಬಲ ನೀಡುತ್ತಿರೋ ಖಾಸಗಿ ಆಸ್ಪತ್ರೆಗಳು ಎಂದಿನಂತೆ ಒಪಿಡಿ ಸೇವೆ ನೀಡಲು ನಿರ್ಧಾರ ಮಾಡಿವೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ನಾಳೆ ಬಂದ್‌ಗೆ ಕೆಲವು ಕಾರ್ಮಿಕ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ನಾವು ಬೆಂಗಳೂರು ನಗರದಲ್ಲಿ ಕಳೆದ ಒಂದು ತಿಂಗಳಿಂದ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನಡೆದಿದೆ. ನಾಳೆಯ ಕಾರ್ಯಕ್ರಮದಲ್ಲಿ ಮೆರವಣಿಗೆ ಇರಲ್ಲ. 9 ಸಂಘಟನೆಗಳು ಅನುಮತಿ ಕೇಳಿವೆ. ನಗರದಲ್ಲಿ ಎಲ್ಲಿಯೇ ಕಲ್ಲೂ ತೂರಾಟ ಮಾಡಿದ್ರು ಆಯೋಜಕರೆ ಹೊಣೆ. ಸಾರ್ವಜನಿಕರ ಭದ್ರತೆ ಸಲುವಾಗಿ ಈ ತಿರ್ಮಾನ‌‌ ಕೈಗೊಳ್ಳಲಾಗಿದೆ. ಏನೇ ಘಟನೆ ನಡೆದರೂ ನಾವು ಅಯೋಜಕರ ಮೇಲೆ ಕೇಸ್ ಹಾಕುತ್ತೇವೆ. ಬಂದ್ ಬಗ್ಗೆ ಯಾರಿಗೂ ರಿಕ್ವೆಸ್ಟ್ ಕೂಡ ಮಾಡಿ ಬಂದ್ ಮಾಡಿಸುವಂತಿಲ್ಲ ಎಂದಿದ್ದಾರೆ.

ನೀವು ಫ್ರೀಡಂಪಾರ್ಕ್ ಬಳಿ ಸೇರಿ ಸಂಬಂಧಪಟ್ಟವರ ಬಳಿ ಕೊಟ್ಟು ಹೋಗಬಹುದು. ಸಂವಿಧಾನ ಹಕ್ಕಿಗೆ ನಾವು ಭಂಗ ತರೋದಿಲ್ಲ. ಕಾನೂನು ಸುವ್ಯವಸ್ಥೆ ಕದಡಿದ್ರೆ ನಾವು ಕ್ರಮಕೈಗೊಳ್ಳುತ್ತೇವೆ. ನಾಳೆ ಹೆಚ್ಚುವರಿ ಭದ್ರತೆ ಮಾಡಲಾಗಿದೆ. ವಿಶೇಷವಾಗಿ ರೈಲ್ವೇಸ್‌ಗೆ ಭದ್ರತೆ ಕೊಡಲಾಗುತ್ತೆ. ದಾರಿ ಮದ್ಯೆ ಪ್ರಚೋದನೆ ಮಾಡಿದ್ರೆ ಕೇಸ್ ಫಿಕ್ಸ್ ಮಾಡಲಾಗುತ್ತದೆ ಎಂದಿದ್ದಾರೆ.

ಜೊತೆಗೆ 15 ಲಕ್ಷ ಬಾಂಡ್ ಬರರೆಸಿಕೊಂಡು 46 ಸಂಘಟನೆಗಳಿಗೆ ಅನುಮತಿ ಕೊಡಲಾಗಿದೆ. ಸುಪ್ರೀಂ ಕೋರ್ಟಿನ ಆದೇಶ ನಾವು ಪಾಲನೆ ಮಾಡುತ್ತೇವೆ. ಭದ್ರತೆಗೆ ಕೆಎಸ್‌ಆರ್‌ಪಿ ತುಕಡಿ ಹಾಗು ಫೈರ್ ಪೋರ್ಸ್‌ಗಳ ನಿಯೋಜನೆ ಮಾಡಲಾಗುವುದು. ಸುಮಾರು 10 ಸಾವಿರಕ್ಕೂ ಹೆಚ್ಚು ಪೊಲೀಸ್ ಭದ್ರತೆಗೆ ನಿಯೋಜನೆ ಮಾಡಲಾಗಿದೆ ಎಂದಿದ್ದಾರೆ.

ಸರ್ಕಾರಿ ಶಾಲಾ – ಕಾಲೇಜ್‌ಗಳಿಗೆ ರಜೆ ಇಲ್ಲ. ಶಿಕ್ಷಣ ಇಲಾಖೆಯಿಂದ ರಜೆ ಘೋಷಣೆ ಮಾಡಿಲ್ಲ ಆದ್ರೆ ಆಯಾ ಜಿಲ್ಲಾಧಿಕಾರಿಗಳು ರಜೆ ಬಗ್ಗೆ ನಿರ್ಧಾರ ಮಾಡ್ತಾರೆ. ಬೆಂಗಳೂರಿನಲ್ಲಿ ಡಿಸಿ ಅಥವಾ ಪೊಲೀಸ್ ಆಯುಕ್ತರು ರಜೆ ಬಗ್ಗೆ ನಿರ್ಧಾರ ಮಾಡ್ತಾರೆ. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಹೇಳಿದ್ದಾರೆ.

ಇನ್ನು ಖಾಸಗಿ ಶಿಕ್ಷಣ ಸಂಸ್ಥೆಗಳೂ ಕೂಡ ತಮ್ಮದೇ ಆದ ರೀತಿಯಲ್ಲಿ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ನಾಳೆ ಬೆಳಗ್ಗೆ ಒಂದೆರಡು ಕಡೆ ಗಲಾಟೆ ನಡೆದರೆ ಪೋಷಕರೇ ಮಕ್ಕಳನ್ನು ಶಾಲೆಗೆ ಕಳುಹಿಸುವ ಮನಸ್ಸು ಮಾಡಲ್ಲ. ಹೀಗಾಗು ಬಹುತೇಕ ಶಾಲಾ ಕಾಲೇಜುಗಳು ಬಂದ್ ಆಗಲಿವೆ ಎನ್ನುವುದು ಆಡಳಿತ ಮಂಡಳಿಗಳ ಮಾತಾಗಿದೆ.

Leave a Reply