ಡಿಜಿಟಲ್ ಕನ್ನಡ ಟೀಮ್:
ಜೆಎನ್ ಯು ವಿವಿ ಆವರಣದ ಮೇಲಿನ ದಾಳಿಯ ಹೊಣೆಯನ್ನು ಹಿಂದೂ ರಕ್ಷಾ ದಳ ಹೊತ್ತುಕೊಂಡಿದೆ.
ಜೆಎನ್ ಯು ರಾಷ್ಟ್ರ ವಿರೋಧಿ ಚಟುವಟಿಕೆಗಳ ಕೇಂದ್ರವಾಗಿ ಬದಲಾಗುತ್ತಿದೆ. ಇದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಜೆಎನ್ ಯು ಮೇಲಿನ ದಾಳಿಯ ಜವಾಬ್ದಾರಿಯನ್ನು ನಾವು ಹೊರುತ್ತೇವೆ. ದಾಳಿ ಮಾಡಿದವರು ನಮ್ಮ ಸದಸ್ಯರು ಎಂದು ಹಿಂದೂ ರಕ್ಷಾ ದಳ ಮುಖ್ಯಸ್ಥ ಪಿಂಕಿ ಚೌಧರಿ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಚೌಧರಿ ಅವರ ಹೇಳಿಕೆ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿದ್ದು, ದಾಳಿ ಮಾಡಿದವರನ್ನು ಪತ್ತೆ ಹಚ್ಚಲು ವಿಡಿಯೋ ನೆರವು ಪಡೆಯಲಾಗುತ್ತಿದೆ.