ಜೆಎನ್ ಯು ಗಲಭೆ: ಹಲ್ಲೆಗೊಳಗಾದ ಐಶ್ ಘೋಷ್ ವಿರುದ್ಧವೇ ಎಫ್ಐಆರ್!

ಡಿಜಿಟಲ್ ಕನ್ನಡ ಟೀಮ್:

ಜೆಎನ್ ಯು ಆವರಣದಲ್ಲಿ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು19 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಇದರಲ್ಲಿ ಹಲ್ಲೆಗೊಳಗಾದ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶ್ ಘೋಷ್ ವಿರುದ್ಧವೂ ಪ್ರಕರಣ ದಾಖಲಾಗಿದೆ.

ದಾಳಿ ಮಾಡಿದ ಬಗ್ಗೆ ಈವರೆಗೆ ಯಾರನ್ನೂ ಬಂಧಿಸದ ದೆಹಲಿ ಪೊಲೀಸರು ಹಲ್ಲೆಗೊಳಗಾದ ಐಶ್ ಘೋಷ್ ವಿರುದ್ಧವೇ ಎಫ್ಐಆರ್ ದಾಖಲಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಮುಸುಕುಧಾರಿಗಳು ಕ್ಯಾಂಪಸ್​​ಗೆ ನುಗ್ಗಿ ಹಿಂಸಾಚಾರ ನಡೆಸಿದ ಒಂದು ದಿನ ಮುನ್ನ ಅಂದರೆ ಜನವರಿ 4ನೇ ತಾರಿಕು ಜೆಎನ್​​ಯು ಸರ್ವರ್‌ ಕೊಠಡಿಯಲ್ಲಿ ಐಶ್ ಘೋಷ್​​​​​ ಸೇರಿದಂತೆ 19 ಮಂದಿ ದಾಂದಲೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ದೆಹಲಿ ಪೊಲೀಸರು ಎಫ್​​ಐಆರ್​​ ದಾಖಲಿಸಿಕೊಂಡಿದ್ದಾರೆ.

Leave a Reply