ಪ್ರೀತಿಯ ಕಿಚ್ಚನಿಗೆ ಸಲ್ಮಾನ್ ಖಾನ್ ಕೊಟ್ಟ ದುಬಾರಿ ಗಿಫ್ಟ್ ಏನು?

ಡಿಜಿಟಲ್ ಕನ್ನಡ ಟೀಮ್:

ಪ್ರೀತಿಯ ಕಿಚ್ಚನಿಗೆ ಸಲ್ಮಾನ್ ಖಾನ್ ಖುದ್ದಾಗಿ ಬಂದು ಒಂದು ಅಚ್ಚರಿಯ ಉಡುಗೊರೆ ಕೊಟ್ಟಿದ್ದಾರೆ.

ಬಿಎಂಡಬ್ಲ್ಯೂ ಎಂ5 ಶ್ರೇಣಿಯ ಕಾರನ್ನು ಸಲ್ಲು, ಕಿಚ್ಚನಿಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ಈ ಬಗ್ಗೆ ಸ್ವತಃ ಸುದೀಪ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಿಳಿಸಿದ್ದು ಹೀಗೆ…

‘ನಾವು ಒಳ್ಳೆಯದನ್ನು ಮಾಡಿದರೆ ನಮಗೂ ಒಳ್ಳೆಯದಾಗುತ್ತದೆ.’ ಇವತ್ತು ಈ ಮಾತನ್ನು ಇನ್ನು ಹೆಚ್ಚು ನಂಬುವಂತೆ ಸಲ್ಮಾನ್ ಖಾನ್ ಅವರು ಮಾಡಿದ್ದಾರೆ. ನನ್ನ ಮನೆಗೆ ಅಚ್ಚರಿಯ ಉಡುಗೊರೆಯಾಗಿ ಬಿಎಂಡಬ್ಲ್ಯೂ ಎಂ5 ಕಾರಿನ ಜತೆಗೆ ತಾವು ಕೂಡ ಬಂದಿದ್ದಾರೆ. ನನಗೆ ಅವರಿಂದ ಸಿಕ್ಕ ಅತ್ಯುತ್ತಮ ಉಡುಗೊರೆ ಇದು.
ನೀವು ನನ್ನ ಹಾಗೂ ನನ್ನ ಕುಟುಂಬದ ಮೇಲೆ ತೋರುತ್ತಿರುವ ಪ್ರೀತಿಗೆ ಧನ್ಯವಾದಗಳು ಸರ್. ನಿಮ್ಮ ಜತೆ ಕೆಲಸ ಮಾಡುವುದು ಹಾಗೂ ನೀವು ನಮ್ಮ ಮನೆಗೆ ಬಂದಿರುವುದು ನನಗೆ ಸಿಕ್ಕ ಗೌರವ.’

ದಬಾಂಗ್ 3 ಚಿತ್ರದ ಮೂಲಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ಭಾಯ್ ಸಲ್ಮಾನ್ ಖಾನ್ ನಡುವಣ ಸ್ನೇಹ ಸಂಬಂಧ ದೊಡ್ಡದಾಗಿ ಬೆಳೆದಿದ್ದು, ಅವರ ಈ ಉಡುಗೊರೆ ಹಾಗೂ ಅಚ್ಚರಿ ಭೇಟಿ ಇದಕ್ಕೆ ಸಾಕ್ಷಿ.

Leave a Reply