ಇರಾಕ್ ಮೇಲೆ ಖಂಡಾಂತರ ಕ್ಷಿಪಣಿ ಹಾರಿಸಿದ ಇರಾನ್! ಆದ್ರೂ ‘ಆಲ್ ಇಸ್ ವೆಲ್’ ಎಂದ ಟ್ರಂಪ್!

ಡಿಜಿಟಲ್ ಕನ್ನಡ ಟೀಮ್:

ತಮ್ಮ ಸೇನಾ ಜೆನರಲ್ ಸೊಲೈಮನಿ ಅವರನ್ನು ಅಮೆರಿಕ ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಇರಾನ್ ಬುಧವಾರ ಇರಾಕ್ ನ ಎರಡು ಸೇನಾ ನೆಲೆಗಳ ಮೇಲೆ ಖಂಡಾಂತರ ಕ್ಷಿಪಣಿ ಹಾರಿಸಿ ದಾಳಿ ಮಾಡಿದೆ.

ಇರಾಕ್ ಹಾಗೂ ಅಮೆರಿಕದ ಎರಡು ಜಂಟಿ ಸೇನಾ ನೆಲೆಗಳ ಮೇಲೆ ಈ ದಾಳಿ ನಡೆದಿದೆ. ಈ ಬೆಳವಣಿಗೆ ನಡುವೆಯೂ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಆಲ್ ಇಸ್ ವೆಲ್’ ಎಂದಿದ್ದಾರೆ.

https://twitter.com/realDonaldTrump/status/1214739853025394693?s=19

ಪೆಂಟಗನ್ ನೀಡಿರುವ ಮಾಹಿತಿ ಪ್ರಕಾರ, ಇರಾನ್ ಒಂದು ಡಜನ್ ಗೂ ಹೆಚ್ಚು ಕ್ಷಿಪನಿಗಳನ್ನು ಇರಾಕ್ ನ ಸೇನಾ ನೆಲೆಗಳ ಮೇಲೆ ಹಾರಿಸಿದ್ದು, ಈ ಸೇನಾ ನೆಲೆಗಳನ್ನು ಹೈ ಅಲರ್ಟ್ ಪರಿಸ್ಥಿತಿಯಲ್ಲಿ ಪರಿಗಣಿಸಲಾಗಿತ್ತು. ಈ ಕ್ಷಿಪಣಿ ದಾಳಿಯಿಂದ ಆಗಿರುವ ನಷ್ಟದ ಲೆಕ್ಕಾಚಾರ ನಡೆಯುತ್ತಿದೆ ಎಂದು ತಿಳಿಸಿದೆ.

ಇತ್ತೀಚೆಗಷ್ಟೇ ಟ್ರಂಪ್ ತಮ್ಮ ಟ್ವಿಟ್ಟರ್ ನಲ್ಲಿ ‘ಇರಾನ್ ಅಣ್ವಸ್ತ್ರ ಕ್ಷಿಪಣಿ ಹೊಂದುವಂತಿಲ್ಲ’ ಹಾಗೂ ‘ಇರಾನಿನ 52 ಸಾಂಸ್ಕೃತಿಕ ಸ್ಥಳಗಳ ಮೇಲೆ ದಾಳಿ ಮಾಡಲು ಅಮೆರಿಕ ಸನ್ನದ್ಧವಾಗಿದೆ’ ಎಂದು ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಇರಾನ್ ಅಧ್ಯಕ್ಷ ಹಸನ್ ರುಹಾನಿ, ‘ನಮ್ಮನ್ನು ಹೆದರಿಸಬೇಡಿ. 52 ಸ್ಥಳಗಳ ಬಗ್ಗೆ ಮಾತನಾಡುವವರು 290 ಸ್ಥಳಗಳ ಬಗ್ಗೆಯೂ ಯೋಚಿಸಬೇಕು’ ಎಂದು ಇರಾನ್ ಕೂಡ ಅಮೆರಿಕದ 290 ಸ್ಥಳಗಳ ಮೇಲೆ ದಾಳಿ ಮಾಡಲಿದೆ ಎಂದು ಸಂದೇಶ ರವಾನಿಸಿದ್ದರು.

Leave a Reply