ಅಮೆರಿಕ ಜತೆಗಿನ ತಿಕ್ಕಾಟ; ಭಾರತದ ಮಧ್ಯಸ್ಥಿಕೆ ಸಂಧಾನ ಬಯಸಿದ ಇರಾನ್!

ಡಿಜಿಟಲ್ ಕನ್ನಡ ಟೀಮ್:

ಅಮೆರಿಕ ಜತೆಗಿನ ತಿಕ್ಕಾಟ ಶಮನಗೊಳಿಸಿ ಶಾಂತಿ ಕಾಪಾಡಲು ಭಾರತ ಮಧ್ಯಸ್ಥಿಕೆ ವಹಿಸಿದರೆ ನಾವು ಅದಕ್ಕೆ ಸಿದ್ಧ ಎಂದು ಇರಾನ್ ತಿಳಿಸಿದೆ.

ಇಂದು ಇರಾಕ್ ನಲ್ಲಿರುವ ಅಮೆರಿಕದ ಜಂಟಿ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಬಳಿಕ ಇರಾನ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಇತ್ತೀಚೆಗೆ ಅಮೆರಿಕ ದಾಳಿಯಲ್ಲಿ ಮೃತಪಟ್ಟ ಸೇನಾ ಜೆನರಲ್ ಸೊಲೈಮನ್ ಅವರಿಗೆ ಇಂದು ನಡೆದ ಸಂತಾಪ ಸೂಚನಾ ಕಾರ್ಯಕ್ರಮದಲ್ಲಿ ಮಾತನಾಡಿದ ಇರಾನ್ ರಾಯಭಾರಿ ಹೇಳಿದ್ದಿಷ್ಟು…

‘ಜಾಗತಿಕ ಮಟ್ಟದಲ್ಲಿ ಶಾಂತಿ ಕಾಪಾಡುವಲ್ಲಿ ಭಾರತ ಮಹತ್ವದ ಪಾತ್ರ ವಹಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಭಾರತ ಈ ಪ್ರದೇಶದ ಭಾಗವೂ ಆಗಿದೆ. ಎಲ್ಲ ದೇಶಗಳ ಎಲ್ಲ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ. ಆದರೆ ನಮಗೆ ಆತ್ಮೀಯ ರಾಷ್ಟ್ರ ಭಾರತ. ನಾವು ಯುದ್ಧದ ಪರ ನಿಲ್ಲುವುದಿಲ್ಲ. ಈ ಭಾಗದಲ್ಲಿ ಎಲ್ಲರೂ ಶಾಂತಿ ಹಾಗೂ ಸೌಹಾರ್ದತೆ ಬಯಸುತ್ತಾರೆ. ಹೀಗಾಗಿ ಭಾರತ ಈ ಪರಿಸ್ಥಿತಿ ತಿಳಿಗೊಳಿಸಲು ಮುಂದಾದರೆ ನಾವು ಅದಕ್ಕೆ ಸಿದ್ಧ.’

Leave a Reply