ದೀಪಿಕಾ ಮುಂಬೈನಲ್ಲಿ ಕುಣಿಯೋದು ಬಿಟ್ಟು ಜೆಎನ್ ಯುಗೆ ಹೋಗಿದ್ದೇಕೆ? ವಿವಾದಾತ್ಮಕ ಹೇಳಿಕೆ ಕೊಟ್ಟ ಬಿಜೆಪಿ ನಾಯಕ

ಡಿಜಿಟಲ್ ಕನ್ನಡ ಟೀಮ್:

ಜೆಎನ್ ಯು ಆವರಣದಲ್ಲಿನ ದಾಳಿಯನ್ನು ಖಂಡಿಸಿ ಹಲ್ಲೆಗೆ ಒಳಗಾದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿರುದ್ಧ ಕರ್ನಾಟಕ ಸೇರಿದಂತೆ ಎಲ್ಲ ಕಡೆಗಳಲ್ಲೂ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ. ಈ ಮಧ್ಯೆ ಮಧ್ಯಪ್ರದೇಶ ಬಿಜೆಪಿ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಮೋಹನ್ ಭಾರ್ಗವ ಒಂದು ಹೆಜ್ಜೆ ಮುಂದೆ ಹೋಗಿ, ‘ದೀಪಿಕಾ ಪಡುಕೋಣೆ ಮುಂಬೈನಲ್ಲಿದ್ದು ಕುಣಿಯೋದು ಬಿಟ್ಟು ಜೆಎನ್ ಯುಗೆ ಹೋಗಿದ್ದೇಕೆ?’ ಎಂದು ಪ್ರಶ್ನಿಸಿ ವಿವಾದ ಸೃಷ್ಟಿಸಿದ್ದಾರೆ.

ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಟಿಯರು ಮುಂಬೈನಲ್ಲಿದ್ದು ಕುಣಿಯಬೇಕೇ ಹೊರತು, ಜೆಎನ್ ಯುಗೆ ಏಕೆ ಹೋಗಬೇಕಿತ್ತು? ದೀಪಿಕಾರಂತೆ ತುಂಬಾ ಜನ ಇದ್ದಾರೆ. ಅವರಿಗೆ ರಾಜಕೀಯ ಮಾಡಬೇಕಿದ್ದರೆ ಚುನಾವಣೆಗೆ ಸ್ಪರ್ಧಿಸಿ ರಾಜಕೀಯ ಪ್ರವೇಶಿಸಬೇಕು’ ಎಂದು ತಿಳಿಸಿದ್ದಾರೆ.

ನಟಿಯರು ಕೇವಲ ಕುಣಿಯುವುದಕ್ಕೆ ಮಾತ್ರ ಇರುವುದು ಎಂಬ ಅರ್ಥದಲ್ಲಿ ಹೇಳಿಕೆ ನೀಡಿರುವ ಬಿಜೆಪಿ ನಾಯಕನ ವಿರುದ್ಧ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿವೆ.

Leave a Reply