ಉಕ್ರೇನ್ ವಿಮಾನ ಪತನ; 176 ಜನರ ರಕ್ತ ಅಂಟಿಕೊಂಡಿರೋದು ಇರಾನ್ ಕೈಗೆ?

ಡಿಜಿಟಲ್ ಕನ್ನಡ ಟೀಮ್:

ಮೊನ್ನೆಯಷ್ಟೇ ಉಕ್ರೇನ್ ವಿಮಾನದ ಮೇಲೆ ಕ್ಷಿಪಣಿ ದಾಳಿ ನಡೆಸಿ 176 ಜನರನ್ನು ಬಲಿ ಪಡೆಯಲಾಗಿದೆ. ಆದರೆ ಇಷ್ಟು ಜನರ ರಕ್ತ ಈಗ ಇರಾನ್ ಕೈಗೆ ಮೆತ್ತಿಕೊಂಡಿರುವ ಸೂಚನೆ ಸಿಗುತ್ತಿದೆ.

ಬುಧವಾರ ಉಕ್ರೇನ್ ಏರ್ ಲೈನ್ ನಿನ ಬೋಯಿಂಗ್ 737-800 ವಿಮಾನ ತೆಹ್ರಾನ್ ನಿಂದ ಹಾರಾಟ ಆರಭಿಸಿದ ಕೆಲ ಹೊತ್ತಿನಲ್ಲೇ ಅದನ್ನು ಹೊಡೆದುರುಳಿಸಲಾಗಿತ್ತು. ಇದರಲ್ಲಿ 82 ಇರಾನ್ ಪ್ರಜೆಗಳು ಹಾಗೂ 63 ಇರಾನ್ ಮೂಲದ ಕೆನಡಾ ಪ್ರಜೆಗಳು ಪ್ರಯಾಣ ಮಾಡುತ್ತಿದ್ದರು. ದಾಳಿಯಲ್ಲಿ ಈ ಎಲ್ಲರು ಸಜೀವ ದಹನವಾದರು.

ಅಮೆರಿಕದ ಡೊನಾಲ್ಡ್ ಟ್ರಂಪ್ ಊಹೆ ಪ್ರಕಾರ, ‘ಉಕ್ರೇನ್ ವಿಮಾನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಹಾರಾಟ ನಡೆಸಿತ್ತು. ಯಾರದೋ ಅಜಾಗರೂಕತೆಯ ತಪ್ಪಿನಿಂದಾಗಿ ಈ ದುರ್ಘಟನೆ ನಡೆದಿರಬಹುದು. ನನ್ನ ಪ್ರಕಾರ ಇದೊಂದು ದುರ್ಘಟನೆಯಾಗಿದೆ’ ಎಂದಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೆವ್, ‘ನಮ್ಮ ಮೂಲಗಳು ಹಾಗೂ ಗುಪ್ತಚರ ಮಾಹಿತಿ ಪ್ರಕಾರ ಈ ಪ್ರಕರಣದಲ್ಲಿನ ಸಾಕ್ಷಿಗಳು ಇರಾನಿನ ಎಸ್ ಟಿಎ ಕ್ಷಿಪಣಿಯಿಂದ ಹೊಡೆದುರುಳಿಸಲಾಗಿದೆ. ಇದು ಉದ್ದೇಶಪೂರ್ವಕ ಕೃತ್ಯ ಅಲ್ಲ’ ಎಂದಿದೆ.

ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ ವಿಮಾನ ಹಾರಾಟಕ್ಕೆ ಅವಕಾಶ ನೀಡಿರುವುದೇ ಈ ಪ್ರಮಾದಕ್ಕೆ ಕಾರಣವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ. ಆದರೆ ಇರಾನ್ ಮಾತ್ರ, ತಾಂತ್ರಿಕ ಕಾರಣಗಳಿಂದಾಗಿ ವಿಮಾನ ಪತನವಾಗಿದ್ದು, ವಿಮಾನಗ ಬ್ಲಾಕ್ ಬಾಕ್ಸ್ ಕೂಡ ಹಾನಿಯಾಗಿದೆ ಎಂದಿದೆ.

Leave a Reply