ಡಿಜಿಟಲ್ ಕನ್ನಡ ಟೀಮ್:
‘ಅಮ್ಮನ ಮನೆ’ ಚಿತ್ರದ ಮೂಲಕ ಮತ್ತೆ ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟಿದ್ದ ರಾಘವೇಂದ್ರ ರಾಜಕುಮಾರ್ ಅವರಿಗೆ 2018ನೇ ಸಾಲಿನ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ.
2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸೌಧದಲ್ಲಿ ಶುಕ್ರವಾರ ಬಿಡುಗಡೆ ಮಾಡಿದ್ದಾರೆ.
ಚಲನಚಿತ್ರರಂಗದ ವಿವಿಧ ವಿಭಾಗಗಳ ಪ್ರಶಸ್ತಿಗಳ ವಿಜೇತರ ಪಟ್ಟಿ ಪ್ರಕಟವಾಗಿದ್ದು, ಕೇಂದ್ರ ಸರ್ಕಾರದಿಂದ ‘ಅತ್ಯುತ್ತಮ ಮಕ್ಕಳ ಚಿತ್ರ’ ಎಂದು ಪ್ರಶಸ್ತಿ ಪಡೆದಿದ್ದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾಗೆ ರಾಜ್ಯ ಸರ್ಕಾರದಿಂದ ಅತ್ಯಂತ ಜನಪ್ರಿಯ ಮನರಂಜನಾ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ಈ ಬಾರಿ ರಾಜ್ಯ ಪ್ರಶಸ್ತಿ ಪಡೆದ ಸಿನಿಮಾ ಮತ್ತು ಕಲಾವಿದರ ಪಟ್ಟಿ ಇಲ್ಲಿದೆ…
- ಮೊದಲ ಅತ್ಯುತ್ತಮ ಚಿತ್ರ: ಆ ಕರಾಳ ರಾತ್ರಿ
- ಎರಡನೇ ಅತ್ಯುತ್ತಮ ಚಿತ್ರ: ರಾಮನ ಸವಾರಿ
- ಮೂರನೇ ಅತ್ಯುತ್ತಮ ಚಿತ್ರ: ‘ಒಂದಲ್ಲಾ ಎರಡಲ್ಲ’
- ಡಾ. ರಾಜ್ಕುಮಾರ್ ಪ್ರಶಸ್ತಿ: ಜೆ.ಕೆ. ಶ್ರೀನಿವಾಸಮೂರ್ತಿ
- ಪುಟ್ಟಣ್ಣ ಕಣಗಾಲ್ ಪ್ರಶಸ್ತಿ: ಪಿ. ಶೇಷಾದ್ರಿ
- ಡಾ. ವಿಷ್ಣುವರ್ಧನ್ ಪ್ರಶಸ್ತಿ: ಬಿ.ಎಸ್. ಬಸವರಾಜು
- ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಸಂತಕವಿ ಕನಕದಾಸರ ರಾಮಧಾನ್ಯ
- ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು
- ಅತ್ಯುತ್ತಮ ಮಕ್ಕಳ ಚಿತ್ರ: ಹೂವು ಬಳ್ಳಿ
- ನಿರ್ದೇಶಕರ ಅತ್ಯುತ್ತಮ ಪದಾರ್ಪಣೆ ಚಿತ್ರ: ಬೆಳಕಿನ ಕನ್ನಡಿ
- ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ತುಳು ಸಿನಿಮಾ ದೇಯಿ ಬೈದೇತಿ
- ಅತ್ಯುತ್ತಮ ನಟ: ರಾಘವೇಂದ್ರ ರಾಜ್ಕುಮಾರ್ (ಅಮ್ಮನ ಮನೆ)
- ಅತ್ಯುತ್ತಮ ನಟಿ: ಮೇಘನಾ ರಾಜ್ (ಇರುವುದೆಲ್ಲವ ಬಿಟ್ಟು)
- ಅತ್ಯುತ್ತಮ ಪೋಷಕ ನಟ: ಬಾಲಾಜಿ ಮನೋಹರ್ (ಚೂರಿಕಟ್ಟೆ)
- ಅತ್ಯುತ್ತಮ ಪೋಷಕ ನಟಿ: ವೀಣಾ ಸುಂದರ್ (ಆ ಕರಾಳ ರಾತ್ರಿ)
- ಅತ್ಯುತ್ತಮ ಕತೆ: ಎಸ್. ಹರೀಶ್ (ನಾಯಿಗೆರೆ)
- ಅತ್ಯುತ್ತಮ ಚಿತ್ರಕತೆ: ಪಿ. ಶೇಷಾದ್ರಿ (ಮೂಕಜ್ಜಿಯ ಕನಸುಗಳು)
- ಅತ್ಯುತ್ತಮ ಸಂಭಾಷಣೆ: ಶಿರಿಷಾ ಜೋಶಿ (ಸಾವಿತ್ರಿಬಾಯಿ ಫುಲೆ)
- ಅತ್ಯುತ್ತಮ ಛಾಯಾಗ್ರಹಣ: ನವೀನ್ ಕುಮಾರ್ (ಅಮ್ಮಚ್ಚಿಯೆಂಬ ನೆನಪು)
- ಅತ್ಯುತ್ತಮ ಸಂಗೀತ ನಿರ್ದೇಶನ: ರವಿ ಬಸ್ರೂರ್ (ಕೆಜಿಎಫ್)
- ಅತ್ಯುತ್ತಮ ಸಂಕಲನ: ಸುರೇಶ್ ಆರ್ಮುಗಂ (ತ್ರಾಟಕ)
- ಅತ್ಯುತ್ತಮ ಬಾಲನಟ: ಮಾಸ್ಟರ್ ಆ್ಯರೆನ್ (ರಾಮನ ಸವಾರಿ)
- ಅತ್ಯುತ್ತಮ ಬಾಲನಟಿ: ಬೇಬಿ ಸಿಂಚನ (ಅಂದವಾದ)
- ಅತ್ಯುತ್ತಮ ಕಲಾ ನಿರ್ದೇಶನ: ಜೆ. ಶಿವಕುಮಾರ್ (ಕೆಜಿಎಫ್)
- ಅತ್ಯುತ್ತಮ ಗೀತರಚನೆ: ಬರಗೂರು ರಾಮಚಂದ್ರಪ್ಪ (ಬಯಲಾಟದ ಭೀಮಣ್ಣ)
- ಅತ್ಯುತ್ತಮ ಗಾಯಕ: ಸಿದ್ಧಾರ್ಥ್ ಬೆಳ್ಮಣ್ಣು (ಸಂತಕವಿ ಕನಕದಾಸರ ರಾಮಧಾನ್ಯ)
- ಅತ್ಯುತ್ತಮ ಗಾಯಕಿ: ಕಲಾವತಿ ದಯಾನಂದ (ದೇಯಿ ಬೈದೇತಿ)