ಇಂಡಿಯಾ vs ಇಂಗ್ಲೆಂಡ್ ಟೀಸರ್ ಬಿಡುಗಡೆ ಮಾಡಿದ ಡಿ ಬಾಸ್!

ಡಿಜಿಟಲ್ ಕನ್ನಡ ಟೀಮ್:

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇಂಡಿಯಾ vs ಇಂಗ್ಲೆಂಡ್ ಚಿತ್ರದ ಟ್ರೇಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಬಿಡುಗಡೆ ಮಾಡಿದರು.

ವಸಿಷ್ಠ ಸಿಂಹ ಮೊದಲ ಬಾರಿಗೆ ನಾಯಕನಾಗಿ, ಮಾನ್ವಿತಾ ನಾಯಕಿ ಆಗಿ ಅನಂತನಾಗ್, ಸುಮಲತಾ ಅಂಬರೀಶ್, ಪ್ರಕಾಶ್ ಬೆಳವಾಡಿರಂತಹ ದೊಡ್ಡ ತಾರಾಗಣ ಹೊಂದಿರುವ ಚಿತ್ರ ಇದೇ ತಿಂಗಳು 24ರಂದು ತೆರೆ ಮೇಲೆ ಬರಲಿದೆ.

‘ಇಂಡಿಯಾ vs ಇಂಗ್ಲೆಂಡ್’ ಇದು ಕ್ರಿಕೆಟ್ ಅಲ್ಲ ಎಂಬ ಶೀರ್ಷಿಕೆ ಮೂಲಕ ಗಮನ ಸೆಳೆದಿರೋ ನಿರ್ದೇಶಕರು ಈ ಚಿತ್ರದಲ್ಲಿ ಏನು ಹೇಳಲಿದ್ದಾರೆ ಎಂಬ ನಿರೀಕ್ಷೆ ಹುಟ್ಟಿಸಿದೆ.

ಅಮೆರಿಕ ಅಮೆರಿಕ, ನನ್ನ ಪ್ರೀತಿಯ ಹುಡುಗಿ, ಪ್ಯಾರಿಸ್ ಪ್ರಣಯ ಸೇರಿದಂತೆ ಅನೇಕ ಚಿತ್ರಗಳಲ್ಲಿ ವಿದೇಶಿ ಸಂಸ್ಕೃತಿ ಜತೆ ಭಾರತೀಯ ಸಂಸ್ಕೃತಿ ಅದ್ಭುತ ಮಿಶ್ರಣದ ಅನುಭವ ನೀಡುವ ನಾಗತಿಹಳ್ಳಿ ಅವರು ಮತ್ತೆ ಈ ಚಿತ್ರದ ಮೂಲಕ ಭಾರತ ಮತ್ತು ಇಂಗ್ಲೆಂಡ್ ನಡುವಣ ಸಂಬಂಧವನ್ನು ವಿಭಿನ್ನ ರೀತಿಯಲ್ಲಿ ಹೇಳಲು ಹೊರಟಿದ್ದಾರೆ.

ನಿರ್ದೇಶಕರ ಪ್ರಕಾರ, ಭಾರತ ಮತ್ತು ಇಂಗ್ಲೆಂಡ್ ನಡುವೆ ಅವಿನಾಭಾವ ಸಂಬಂಧವಿದೆ. ಅವರು ನಮ್ಮನ್ನು ದ್ವೇಷಿಸಿದರು ಅಂತಾ ನಾವು ಅವರನ್ನು ಒಮ್ಮೆ ದೂಷಿಸಿದರೆ, ಮತ್ತೆಕೆಲವೊಮ್ಮೆ ಅವರು ಕೊಟ್ಟ ವಿಜ್ಞಾನ ಹಾಗೂ ಇತರೆ ಕೊಡುಗೆಯನ್ನು ಸ್ವಾಗತಿಸುತ್ತೇವೆ. ಹೀಗಾಗಿ ಈ ಸಂಬಂಧವನ್ನು ಇಟ್ಟುಕೊಂಡು ನಾವು ಮುಂದಿನ ಪೀಳಿಗೆಗೆ ಈ ಚಿತ್ರದಲ್ಲಿ ಸಂದೇಶ ನೀಡಲಾಗುತ್ತಿದೆ.

Leave a Reply