ಪಾಕಿಸ್ತಾನ ಮೆಚ್ಚಿಸಲು ವಿರೋಧ ಪಕ್ಷಗಳಿಂದ ಸಿಎಎಗೆ ವಿರೋಧ: ರವಿಶಂಕರ್ ಪ್ರಸಾದ್

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನವನ್ನು ಮೆಚ್ಚಿಸುವ ಸಲುವಾಗಿ ವಿರೋಧ ಪಕ್ಷಗಳು ಪೌರತ್ವ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತಿವೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಟೀಕಿಸಿದ್ದಾರೆ.

ನಿನ್ನೆ ನಡೆದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದ ಸಭೆಗೆ, ಎಎಪಿ, ಟಿಎಂಸಿ, ಡಿಎಂಕೆ ಹಾಗೂ ಬಿಎಸ್ಪಿ ಪಕ್ಷಗಳು ಗೈರಾಗುದ್ದು ಇದು ವಿರೋಧ ಪಕ್ಷಗಳ ನಿಲುವನ್ನು ಬಹಿರಂಗಪಡಿಸಿದೆ ಎಂದು ದೆಹಲಿಯಲ್ಲಿ ಮಂಗಳವಾರ ತಿಳಿಸಿದ್ದಾರೆ.

ಇನ್ನು ಎನ್ ಸಿಆರ್ ವಿಚಾರವಾಗಿ ವಿರೋಧ ಪಕ್ಷಗಳು ಇಬ್ಬಗೆಯ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿದರು. ಎನ್ ಪಿಆರ್ ಮೊದಲು ಯಾರು ತರಲು ಮುಂದಾದರು. ಮನಮೋಹನ್ ಸಿಂಗ್ ಅವರು ಸಂಸತ್ತಿನಲ್ಲಿ ಏನು ಹೇಳಿದ್ದರು. ಕಾಂಗ್ರೆಸ್ ಈ ವಿಚಾರದಲ್ಲಿ ದ್ವಂದ್ವ ನಿಲುವು ತಳೆದಿದೆ. ನಗರ ನಕ್ಸಲರು ತುಕುಡೇ ಗುಂಪಿಗೆ ಬೆಂಬಲ ನೀಡಿದ್ದು, ಕಾಂಗ್ರೆಸ್ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದರು.

Leave a Reply