ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ‘ಮಾಸ್ಟರ್ ಬ್ರೈನ್’ ಜೆಪಿ ನಡ್ಡಾ!

ಡಿಜಿಟಲ್ ಕನ್ನಡ ಟೀಮ್:

ಅಂತೂ ಇಂತೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮೋದಿ ಹಾಗೂ ಅಮಿತ್ ಶಾರ ನಂಬಿಕಸ್ಥ ಹಾಗೂ ಚುನಾವಣೆ ಮಾಸ್ಟರ್ ಮೈಂಡ್ ಎಂದೇ ಕರೆಸಿಕೊಳ್ಳುವ ಜೆಪಿ ನಡ್ಡಾ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಕಳೆದ ವರ್ಷ ಜೂನ್ ತಿಂಗಳಲ್ಲೇ ಅಮಿತ್ ಶಾರ ಅಧ್ಯಕ್ಷ ಅವಧಿ ಮುಗಿದಿತ್ತಾದರೂ ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳ ವಿಧಾನಸಭೆ ಚುನಾವಣೆ ಕಾರಣ ಶಾ ಅವರೇ ಈ ಸ್ಥಾನದಲ್ಲಿ ಮುಂದುವರಿದಿದ್ದರು.

ಆರೆಸ್ಸೆಸ್ ಹಿನ್ನೆಲೆಯ ಹಿಮಾಚಲ ಪ್ರದೇಶ ಮೂಲದ ನಡ್ಡಾ ಅವರು ಇತರೆ ನಾಯಕರಾದ ಅಮಿತ್ ಶಾ, ನಿತಿನ್ ಗಡ್ಕರಿಯಂತೆ ಹೆಚ್ಚು ಸದ್ದು ಮಾಡಿದವರಲ್ಲ. ಆದರೆ ಇವರ ಮಾಸ್ಟರ್ ಬ್ರೈನ್ ಮಾತ್ರ ಬಿಜೆಪಿಯ ಅನೇಕ ಗೆಲುವಿನಲ್ಲಿ ತೆರೆಮರೆ ಹಿಂದೆ ಕೆಲಸ ಮಾಡಿದ್ದೇ ಹೆಚ್ಚು.

ಈ ಹಿಂದೆ ಜೆಪಿ ನಡ್ಡಾ ಅವರ ಈವರೆಗಿನ ಹಾದಿ ಕುರಿತ ಲೇಖನ ಡಿಜಿಟಲ್ ಕನ್ನಡದಲ್ಲಿ ಪ್ರಕಟವಾಗಿದ್ದು, ಇಲ್ಲಿ ಓದಬಹುದು.

Leave a Reply