ಡಿಜಿಟಲ್ ಕನ್ನಡ ಟೀಮ್:
ಸಿಎಎ ಬೆಂಬಲಿಸಿ ಕೇಂದ್ರ ಸರ್ಕಾರ ವಿರೋಧ ಪಕ್ಷಗಳಿಗೆ ಸಡ್ಡು ಹೊಡೆಯಲು ಕರೆ ನೀಡಿದ್ದ ಮಿಸ್ಡ್ ಕಾಲ್ ಅಭಿಯಾನದ ಮಾದರಿಯಲ್ಲೇ ಕಾಂಗ್ರೆಸ್ ಕೂಡ ಸರ್ಕಾರದ ವಿರುದ್ಧ ಮಿಸ್ಡ್ ಕಾಲ್ ಅಭಿಯಾನ ಶುರು ಮಾಡಿದೆ. ಆದರೆ ಈಗ ಕಾಂಗ್ರೆಸ್ ನವರು ನಿರುದ್ಯೋಗ ವಿಚಾರವಾಗಿ ಈ ಅಭಿಯಾನಕ್ಕೆ ಕರೆ ನೀಡಿದ್ದಾರೆ.
‘ದೇಶದ ಭರವಸೆಯ ಬೆಳಕಾಗಬೇಕಿದ್ದ ಯುವಜನತೆ ನಿರುದ್ಯೋಗ ಸಮಸ್ಯೆಯೊಂದಿಗೆ ಸೆಣಸುತ್ತಿದ್ದಾರೆ, ಆದರೂ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಉದ್ಯೋಗ ಸೃಷ್ಟಿಯ ಬಗ್ಗೆ ತಾತ್ಸಾರ ತೋರುತ್ತಿದೆ. ಬನ್ನಿ ಈ ಅಪಾಯದ ವಿರುದ್ಧ ದನಿಯೆತ್ತೋಣ,
8151994411 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ನಿರುದ್ಯೋಗ ನೊಂದಣಿ ಅಭಿಯಾನದಲ್ಲಿ ಪಾಲ್ಗೊಳ್ಳೋಣ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.