ಹ್ಯಾರಿಸ್ ಹತ್ಯೆಗೆ ಸಂಚು ನಡೆದಿದ್ಯಾ? ಸ್ಫೋಟದ ಬಗ್ಗೆ ಅವರು ಹೀಗ್ಯಾಕೆ ಹೇಳಿದ್ರು?

ಡಿಜಿಟಲ್ ಕನ್ನಡ ಟೀಮ್:

‘ರಾಜಕೀಯದಲ್ಲಿ ಸೋಲಿನ ಅಸೂಹೆ ಕೊಲ್ಲುವ ಹಂತಕ್ಕೆ ಹೋಗಬಾರದು…’ ಇದು ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಹೊರಬಂದ ನಂತರ ಶಾಸಕ ಎನ್.ಎ ಹ್ಯಾರಿಸ್ ಕೊಟ್ಟಿರುವ ಹೇಳಿಕೆ.

ನಿನ್ನೆ ರಾತ್ರಿ ವನ್ನಾರ್ ಪೇಟೆಯಲ್ಲಿ ದಿವಂಗತ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂಜಿಆರ್ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಶಾಸಕ ಹ್ಯಾರಿಸ್ ಭಾಗವಹಿಸಿದ್ದ ಸಂದರ್ಭದಲ್ಲಿ ಅನುಮಾನಾಸ್ಪದ ಸ್ಫೋಟ ಸಂಭವಿಸಿದ್ದು, ಹ್ಯಾರಿಸ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇಂದು ಅವರು ನೀಡಿರುವ ಹೇಳಿಕೆ ನೋಡಿದರೆ, ಅವರು ತಮ್ಮ ಹತ್ಯೆಗೆ ಸಂಚು ನಡೆಸಲಾಗಿದೆ ಎಂಬ ಆರೋಪ ಮಾಡಿದಂತಿದೆ. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು…

ರಾಜಕೀಯದಲ್ಲಿ ಸೋಲು ಗೆಲುವು ಸಹಜ. ಸೋತವರಿಗೆ ಅಸೂಯೆ ಇರುತ್ತೆ ನಿಜ. ಆದರೆ, ಅದು ಜೀವವನ್ನೇ ತೆಗೆಯುವ ಹಂತಕ್ಕೆ ಹೋಗಬಾರದು. ನನ್ನ ಜೀವ ತೆಗೆಯಲು ಮುಂದಾದವರಿಗೆ ದೇವರು ಒಳ್ಳೆಯದನ್ನು ಮಾಡಲಿ.

ನಾನು ಈಗ ಆರೋಗ್ಯವಾಗಿದ್ದೇನೆ. ಕಾರ್ಯಕರ್ತರ ಪ್ರಾರ್ಥನೆಯಿಂದ ಗುಣಮುಖನಾಗಿದ್ದೇನೆ. ನಿನ್ನೆ ಸ್ಪೋಟಗೊಂಡ ವಸ್ತು ಪಟಾಕಿ ತರ ಇರಲಿಲ್ಲ. ರೌಂಡ್ ಬಾಲ್ ತರ ಇತ್ತು. ಸ್ಪೋಟಗೊಂಡ ವಸ್ತುವನ್ನು ಪರಿಶೀಲನೆಗೆ ವಿಧಿ ವಿಜ್ಜಾನ ಇಲಾಖೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply