ಹಾವು ಏಣಿ ಆಟವಾದ ಸಂಪುಟ ವಿಸ್ತರಣೆ!

ಡಿಜಿಟಲ್ ಕನ್ನಡ ಟೀಮ್:

ದಾವೋಸ್ ನಿಂದ ಸಿಎಂ ಯಡಿಯೂರಪ್ಪ ವಾಪಸ್ಸಾದ ಬಳಿಕ ನಿರೀಕ್ಷೆಯಂತೆ ಸಂಪುಟ ವಿಸ್ತರಣೆ ಚಟುವಟಿಕೆ ಗರಿಗೆದರಿವೆ. ಇಂದು ಬೆಳಿಗ್ಗೆಯಿಂದ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದ್ದು ಅವುಗಳು ಹೀಗಿವೆ…

  • ಇಂದು ಸಿಎಂ ಯಡಿಯೂರಪ್ಪ ಹಾಗೂ ಆರೆಸ್ಸೆಸ್ ನಾಯಕ ಬಿಎಲ್ ಸಂತೋಷ್ ಅವರು ಸಭೆ ನಡೆಸಿದ್ದು, ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.
  • ಹೊಸ ಶಾಸಕರಲ್ಲಿ ಕೆಲವರಿಗೆ ಮಾತ್ರ ಮಂತ್ರಿ ಪಟ್ಟ ಸಿಗಲಿದೆ ಎಂಬ ಸುದ್ದಿಯಿಂದ ಮೂಲ ಬಿಜೆಪಿಗರಲ್ಲಿ ಹೊಸ ಉತ್ಸಾಹ ತಂದಿದ್ದು, ಕೆಲವರು ಯಡಿಯೂರಪ್ಪನವರ ಬಗ್ಗೆ ಹಾಗೂ ಮತ್ತೇ ಕೆಲವರು ಸಂತೋಷ್ ಅವರ ಬಳಿ ಲಾಭಿ ನಡೆಸುತ್ತಿದ್ದಾರೆ.
  • ಸಂಪುಟ ವಿಸ್ತರಣೆ ತಿಂಗಳಾಂತ್ಯಕ್ಕೆ ಮಾಡುತ್ತೇವೆ ಎಂದು ನಿನ್ನೆ ಹೇಳಿದ್ದ ಯಡಿಯೂರಪ್ಪ ಇಂದು ನಾನು ಈಗ ಆ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ.
  • ಕೇವಲ ಮಂತ್ರಿಗಿರಿ ಮಾತ್ರವಲ್ಲ ಡಿಸಿಎಂ ಹುದ್ದೆಗೂ ಲಾಭಿ ನಡೆಸುತ್ತಿದ್ದು, ಈ ಕುರಿತು ಶ್ರೀರಾಮುಲು ಮಾತನಾಡಿದ್ದಾರೆ. ಜನರಿಗೆ ಶ್ರೀರಾಮುಲು ಉಪಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇದೆ. ಈ ಬಗ್ಗೆ ಯಡಿಯೂರಪ್ಪ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಒತ್ತಡ ಹೇರಿದ್ದಾರೆ.
  • ಇನ್ನು ಲಕ್ಷ್ಮಣ್ ಸವದಿ ಮಾತನಾಡಿ, ಎಂಟಿಬಿ ಹಾಗೂ ವಿಶ್ವನಾಥ್ ದುರಾದೃಷ್ಟದಿಂದ ಉಪಚುನಾವಣೆಯಲ್ಲಿ ಸೋತಿದ್ದಾರೆ. ಅವರು ಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.
  • ಇನ್ನು ನಿನ್ನೆ ರಾತ್ರಿ ಸಿಎಂ ಪುತ್ರ ಬಿವೈ ವಿಜಯೇಂದ್ರ ಅವರು ಬೆಳಗಾವಿಗೆ ಪ್ರಯಾಣ ಮಾಡಿದ್ದು, ಬೆಳಗಾವಿಯ ರಮೇಶ್ ಕುಮಟಳ್ಳಿ ಹಾಗೂ ಶ್ರೀಮಂತ್ ಪಾಟೀಲ್ ಅವರ ಜತೆ ಮಾತುಕತೆ ನಡೆಸಲಿದ್ದಾರೆ ಎಂಬ ಮಾಹಿತಿ ಬಂದಿದೆ.

Leave a Reply