ಪದ್ಮ ಪ್ರಶಸ್ತಿ ಪ್ರಕಟ: ಮತ್ತೆ ಮನಗೆದ್ದ ಮೋದಿ ಸರ್ಕಾರ!

ಡಿಜಿಟಲ್ ಕನ್ನಡ ಟೀಮ್:

ಪ್ರಸಕ್ತ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಈ ಬಾರಿಯೂ ಸಮಾಜದಲ್ಲಿ ನಿಸ್ವಾರ್ಥ ಸೇವೆ ಮಾಡಿ ಎಲೆಮರೆಕಾಯಿಯಂತಿರುವ ಮಹಾನ್ ಚೇತನರಿಗೆ ಈ ಗೌರವ ನೀಡುವ ಮೂಲಕ ಮೋದಿ ಸರ್ಕಾರ ಮತ್ತೊಮ್ಮೆ ಈ ವಿಚಾರದಲ್ಲಿ ಮನಗೆದ್ದಿದೆ.

ಕಳೆದ ಕೆಲವು ವರ್ಷಗಳಿಂದ ಪದ್ಮ ಪ್ರಶಸ್ತಿ ಪುರಸ್ಕೃತ ಪಟ್ಟಿ ನೋಡುವುದೇ ಒಂದು ಚೆಂದ ಅಂತಹ ಮಹಾನ್ ವ್ಯಕ್ತಿಗಳಿಗೆ ಈ ಪುರಸ್ಕಾರ ನೀಡಲಾಗುತ್ತಿದೆ. ಈ ಬಾರಿಯೂ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಪ್ರಶಸ್ತಿಯ ಘನತೆ ಹೆಚ್ಚಿಸುವ ಮಂದಿ ಇದ್ದು, ಅವರಲ್ಲಿ ಇಬ್ಬರು ಮಹನೀಯರು ಹೀಗಿದ್ದಾರೆ…

ಮೊಹಮದ್ ಷರೀಫ್ (ಷರೀಫ್ ಅಜ್ಜ): ಕಳೆದ 25 ವರ್ಷಗಳಿಂದ ಅನಾಥ ಶವಗಳಿಗೆ ಅಂತಿಮ ಸಂಸ್ಕಾರ ನೀಡುತ್ತಾ ಬಂದಿರುವ ಷರೀಫ್ ಅಜ್ಜ ಮೂಲತಃ ಸೈಕಲ್ ಮೆಕಾನಿಕ್. ಈ ಅಜ್ಜ ಫೈಜಾಬಾದ್ ಸುತ್ತಮುತ್ತಲಿನ ಪ್ರದೇಶದಲ್ಲಿ ಈವರೆಗೂ ಒಂದಲ್ಲಾ ಎರಡಲ್ಲ ಬರೋಬ್ಬರಿ 25 ಸಾವಿರ ಅನಾಥ ಶವಗಳಿಗೆ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ. ಈ ಅಜ್ಜ ಇದುವರೆಗೂ ಹಿಂದೂ ಮುಸಲ್ಮಾನ ಎಂದು ವ್ಯತ್ಯಾಸವಿಲ್ಲದೆ ಪ್ರತಿ ಶವಕ್ಕೂ ಅಂತಿಮ ಸಂಸ್ಕಾರ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

ಲಾಂಗರ್ ಬಾಬಾ: ಲಾಂಗರ್ ಬಾಬಾ ಎಂದೇ ಕರೆಸಿಕೊಳ್ಳುವ ಜಗದೀಶ್ ಲಾಲ್ ಅಹುಜಾ ಅವರು ಈ ಬಾರಿ ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ ಕಾಣಸಿಗುವ ಮತ್ತೊಂದು ಚೇತನ. ಇವರು ಕಳೆದ ಎರಡು ದಶಕಗಳಿಂದ ಪ್ರತಿ ನಿತ್ಯ 500ಕ್ಕೂ ಹೆಚ್ಚು ರೋಗಿಗಳಿಗೆ ಲಾಂಗರ್ (ಗುರುದ್ವಾರಗಳಲ್ಲಿ ಉಚಿತವಾಗಿ ನೀಡುವ ಊಟ) ಅನ್ನು ನೀಡುತ್ತಾ ಬಂದಿದ್ದಾರೆ. ಜತೆಗೆ ಅನೇಕ ಬಡ ರೋಗಿಗಳಿಗೆ ಆರ್ಥಿಕ ನೆರವನ್ನು ನೀಡಿ ತಮ್ಮ ಔದಾರ್ಯ ಮೆರೆದಿದ್ದಾರೆ.

Leave a Reply