ಸಿದ್ದರಾಮಯ್ಯ ಹುಲಿಯಾ ಆದ್ರೆ ಯಡಿಯೂರಪ್ಪ ರಾಜಹುಲಿ: ಅಶೋಕ್

ಡಿಜಿಟಲ್ ಕನ್ನಡ ಟೀಮ್:

‘ಸಿದ್ದರಾಮಯ್ಯ ಹುಲಿಯಾ ಆದ್ರೆ ಸಿಎಂ ಯಡಿಯೂರಪ್ಪ ರಾಜಾಹುಲಿ. ಹುಲಿಯಾಗಿಂತ ರಾಜಾಹುಲಿ ದೊಡ್ಡದು. ರಾಜಾಹುಲಿಗೆ ರಾಜ್ಯ ನಡೆಸುವುದು ಗೊತ್ತಿದೆ…’ ಇದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೇವಡಿ ಸಚಿವ ಆರ್ ಅಶೋಕ್ ಮಾಡಿರುವ ಲೇವಡಿ.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಶಾಸಕರು ಬಿಜೆಪಿಯಲ್ಲಿ ಅತಂತ್ರರಾಗಿದ್ದಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿದರು.

‘ಸಿದ್ದರಾಮಯ್ಯ ಅವರೇ ಈಗ ಅಂತಂತ್ರರಾಗಿದ್ದು, ಲಾಯರ್ ಗಿರಿ ಮಾಡಲು ಹೊರಟಿದ್ದಾರೆ. ಸದ್ಯದಲ್ಲೇ ಕಾಂಗ್ರೆಸ್ ನಿಂದ ಸಿದ್ದರಾಮಯ್ಯ ಅವರಿಗೆ ಗೇಟ್ ಪಾಸ್ ಸಿಗಲಿದೆ. ಹೀಗಾಗಿ ಅವರು ಮತ್ತೆ ವಕೀಲಿಕೆ ಆರಂಭಿಸಿದ್ದಾರೆ’ ಎಂದರು.

ಇನ್ನು ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿ, ‘ಉಪಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ಕೊಡುವ ನಿರ್ಧಾರವನ್ನು ಮುಖ್ಯಮಂತ್ರಿಗಳು ಕೈಗೊಳ್ಳುತ್ತಾರೆ. ಸಂಪುಟ ವಿಸ್ತರಣೆ ವಿಚಾರದಲ್ಲಿ ಚರ್ಚಿಸಲು ಮುಖ್ಯಮಂತ್ರಿಗಳು ದೆಹಲಿಗೆ ಹೋಗುವ ಸಾಧ್ಯತೆ ಕಡಿಮೆ. ಈಗಾಗಲೇ ಅವರು ಅಮಿತ್ ಶಾ ಜೊತೆ ಚರ್ಚೆ ಮಾಡಿದ್ಧಾರೆ. ಆದರೆ, ಸೋತವರಿಗೆ ಮಂತ್ರಿ ಸ್ಥಾನ ಸದ್ಯಕ್ಕಂತೂ ಇಲ್ಲ. ಆ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಇನ್ನು ಮಂತ್ರಿ ಸ್ಥಾನ ತ್ಯಾಗ ಮಾಡುವ ವಿಚಾರದಲ್ಲಿ ಮಾಧುಸ್ವಾಮಿ ಅವರದ್ದು ವೈಯಕ್ತಿಕ ಹೇಳಿಕೆ. ಸಚಿವರು ಸ್ಥಾನ ತ್ಯಾಗ ಮಾಡುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ. ಅಂಥ ಯಾವುದೇ ಚರ್ಚೆಗಳೂ ಸರ್ಕಾದ ಮಟ್ಟದಲ್ಲಿ ನಡೆದಿಲ್ಲ’ ಎಂದರು.

Leave a Reply