ಸೂಪರ್ ಓವರ್ ನಲ್ಲಿ ಹಿಟ್ ಮ್ಯಾನ್ ಶೋ! ಟೀಮ್ ಇಂಡಿಯಾಗೆ ರೋಚಕ ಜಯ!

ಡಿಜಿಟಲ್ ಕನ್ನಡ ಟೀಮ್:

ಸೂಪರ್ ಓವರ್ ನಲ್ಲಿ ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ರೋಹಿತ್ ಶರ್ಮಾ 65, 15(ಸೂಪರ್ ಓವರ್)ರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ನ್ಯೂಜಿಲೆಂಡ್ ನೆಲದಲ್ಲಿ ಐತಿಹಾಸಿಕ ಟಿ20 ಸರಣಿ ಗೆದ್ದಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಆತಿಥೇಯ ನ್ಯೂಜಿಲೆಂಡ್ 20 ಓವರ್ ಗಳಲ್ಲಿ ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ಪಂದ್ಯ ಟೈ ಆಯಿತು. ನಂತರ ಸೂಪರ್ ಓವರ್ ನಲ್ಲಿ ನ್ಯೂಜಿಲೆಂಡ್ 16 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಭಾರತ ರೋಹಿತ್ ಶರ್ಮಾ ಅಂತಿಮ 2 ಎಸೆತಗಳಲ್ಲಿ ಸಿಕ್ಸರ್ ಬಾರಿಸಿ ತಂಡಕ್ಕೆ ಸರಣಿ ಜಯ ತಂದುಕೊಟ್ಟರು.

ನ್ಯೂಜಿಲೆಂಡ್ ಪರ ನಾಯಕ ಕೇನ್ ವಿಲಿಯಮ್ಸನ್ 95 ಹಾಗೂ 11 (ಸೂಪರ್ ಓವರ್) ರನ್ ಗಳಿಸಿದರು ತಂಡ ಗೆಲ್ಲಲು ಸಾಧ್ಯವಾಗಿಲ್ಲ. ಪಂದ್ಯದ ಅಂತಿಮ ನಾಲ್ಕು ಎಸೆತದಲ್ಲಿ ಕೇವಲ 3 ರನ್ ಅಗತ್ಯವಿದ್ದಾಗ ವಿಲಿಯಮ್ಸನ್ ಹಾಗೂ ಅಂತಿಮ ಎಸೆತದಲ್ಲಿ ರಾಸ್ ಟೇಲರ್ ವಿಕೆಟ್ ಪಡೆದ ಶಮಿ ಪಂದ್ಯವನ್ನು ಸೂಪರ್ ಓವರ್ ಗೆ ತೆಗೆದುಕೊಂಡು ಹೋದರು.

ಈ ಜಯದೊಂದಿಗೆ ಭಾರತ 5 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಗೆದ್ದುಕೊಂಡಿದೆ.

Leave a Reply