ಸುದೀಪ್‌ಗೆ ಅವಮಾನ? ಸ್ಯಾಂಡಲ್‌ವುಡ್‌ನಲ್ಲಿ ಮುಂದುವರಿಯಿತೆ ಸ್ಟಾರ್ ವಾರ್!?

ಡಿಜಿಟಲ್ ಕನ್ನಡ ಟೀಮ್:

ಸ್ಯಾಂಡಲ್‌ವುಡ್‌ನಲ್ಲಿ ನಟ ದರ್ಶನ್ ಹಾಗು ಕಿಚ್ಚ ಸುದೀಪ್ ಒಂದು ಕಾಲದ ಪರಮಾಪ್ತ ಸ್ನೇಹಿತರು. ದಿವಂಗತ ನಟ ರೆಬಲ್ ಸ್ಟಾರ್ ಅಂಬರೀಷ್ ಕೂಡ ಈ ಇಬ್ಬರು ನನ್ನ ಎರಡು ಕಣ್ಣುಗಳು ಎಂದಿದ್ದರು. ಆದರೆ ಈ ಇಬ್ಬರ ಸ್ನೇಹದ ಮೇಲೆ ಅದು ಯಾರ ಕಣ್ಣು ತಾಕಿತೋ ಏನೋ ಈ ಇಬ್ಬರು ನಟರ ನಡುವೆ ವೈಮನಸ್ಯ ಹುಟ್ಟಿಕೊಂಡಿದೆ. ಇದೀಗ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದ ಪರಿಸ್ಥಿತಿ ಇದೆ. ಅವರ ಅಭಿಮಾನಿಗಳ ನಡುವೆಯೂ ಮನಸ್ತಾಪ ಜೋರಾಗಿದ್ದು, ಒಂದೊಂದು ಸಿನಿಮಾ ಬಿಡುಗಡೆ ವೇಳೆಯೂ ಉಭಯ ನಾಯಕರ ಅಭಿಮಾನಿಗಳು ಸೇಡು ಸಾಧಿಸುವ ಮಟ್ಟಕ್ಕೆ ಇಬ್ಬರ ನಡುವಿನ ವೈಷಮ್ಯ ಬೆಳೆದು ನಿಂತಿದೆ.

ಇದೀಗ ಈ ಇಬ್ಬರು ನಟರ ನಡುವಿನ ವೈಷಮ್ಯ ಮತ್ತೊಂದು ಹಂತ ತಲುಪಿದ್ದು, ಇಲ್ಲಿ ಕಿಚ್ಚ ಸುದೀಪ್‌ಗೆ ಉದ್ದೇಶ ಪೂರ್ವಕವಾಗಿ ಅವಮಾನ ಮಾಡಲಾಯ್ತಾ ಅನ್ನೋ ಅನುಮಾನ ಮೂಡುವಂತೆ ಮಾಡಿದೆ. ಕೇವಲ ಇಬ್ಬರು ಸ್ಟಾರ್ ನಟರ ನಡುವಿನ ಜಿದ್ದಾಜಿದ್ದಿ ವಾರ್ ಆಗದೆ ಇಡೀ ಕನ್ನಡ ಚಿತ್ರರಂಗವೇ ಛಿದ್ರವಾಗುವ ಭೀತಿ ಹುಟ್ಟಿಸುವಂತಿದೆ. ನಿನ್ನೆ ರಾತ್ರಿ ನಟ ಆದಿತ್ಯ ಅಭಿನಯದ ಮುಂದುವರೆದ ಅಧ್ಯಾಯ ಸಿನಿಮಾ ಚಿತ್ರದ ಸುದ್ದಿಗೋಷ್ಠಿ ನಡೆದಿತ್ತು. ಈ ವೇಳೆ ಕನ್ನಡ ಸಿನಿಮಾ ನಿರ್ದೇಶಕರ ವಿಡಿಯೋ ಪ್ರಸಾರ ಮಾಡಲಾಯ್ತು. ವೈ.ವಿ ರಾವ್ ಅವರಿಂದ ಹಿಡಿದು ಪ್ರಶಾಂತ್ ನೀಲ್ ತನಕ ಎಲ್ಲಾ ನಿರ್ದೇಶಕರ ಫೋಟೋ ಬಳಸಿ ವಿಡಿಯೋ ಮೂಲಕ ನಿರ್ದೇಶಕರಿಗೆ ಧನ್ಯವಾದ ಹೇಳಲಾಯ್ತು.

ಆದ್ರೆ ಆ ವಿಡಿಯೋದಲ್ಲಿ ಕಿಚ್ಚ ಸುದೀಪ್ ಅವರನ್ನು ಹೊರಗಿಟ್ಟು ಮಾಡಿದ್ರಾ ಎನಿಸುವಂತಿತ್ತು. ಇದಕ್ಕೆ ಪರೋಕ್ಷ ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಎಂಬ ಪ್ರಶ್ನೆ ಉದ್ಭವಿಸಿದೆ.

ಮುಂದುವರೆದ ಅಧ್ಯಾಯ ಚಿತ್ರದ ಸುದ್ದಿಗೋಷ್ಠಿ ಕಾರ್ಯಕ್ರಮಕ್ಕೆ ನಟ ದರ್ಶನ್ ಮುಖ್ಯ ಅತಿಥಿಯಾಗಿ ಆಗಮಿಸಿದ್ರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಅತಿಥಿ ಆಗಿದ್ದರಿಂದ ಸುದೀಪ್ ಅವರ ಫೋಟೋ ಬಳಕೆ ಮಾಡದೆ ಉದ್ದೇಶಪೂರ್ವಕವಾಗಿಯೇ ವೀಟಿ ರೆಡಿ ಮಾಡಲಾಯ್ತಾ ಎನ್ನುವ ಅನುಮಾನ ಮೂಡಿದೆ. ಈ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಮತ್ತೆ ಹಳೇ ದೋಸ್ತಿಗಳ ಮಧ್ಯೆ ಕಿಚ್ಚು ಹೊತ್ತಿಕೊಂಡಿದ್ಯಾ..? ಅನ್ನೋ ಪ್ರಶ್ನೆಗೆ ಉತ್ತರ ಸಿಗಲಾರದಾಗಿದೆ.

ಸುದೀಪ್ ಫೋಟೋ ಕೈ ಬಿಟ್ಟು ವೀಟಿ ರೆಡಿ ಮಾಡಿರುವ ವಿಚಾರದ ಬಗ್ಗೆ ನಟ ಆದಿತ್ಯ ಅವರನ್ನು ಪ್ರಶ್ನಿಸಿದ್ರೆ ನೇರವಾಗಿ ನೋ ಕಾಮೆಂಟ್ಸ್ ಎಂದಿದ್ದಾರೆ. ನಾನು ಅದನ್ನ ನೋಡಿಲ್ಲ ಮಾಡಿದವರನ್ನ ಕೇಳಿ ಎಂದು ಉತ್ತರಿಸಿದ್ದಾರೆ. ಆದ್ರೆ ಸಿನಿಯಾರಿಟಿ ಮೇಲೆ ಧನ್ಯವಾವ ಹೇಳಿದ್ದಿವಿ ಎಂದು ನಟ ಆದಿತ್ಯ ನುಣಿಚಿಕೊಳ್ಳುವ ಯತ್ನ ಮಾಡಿದ್ದಾರೆ. ಈ ಅವಮಾನ ಮತ್ಯಾವ ಮಟ್ಟಕ್ಕೆ ಮುಟ್ಟಲಿದೆಯೋ ಅನ್ನೋ ಆತಂಕ ಸಿನಿ ಪ್ರಿಯರನ್ನು ಕಾಡುತ್ತಿದೆ.

Leave a Reply