ಕೃಷಿಕರ ಹಿತ ಕಾಪಾಡಲು ಮೋದಿಯ 16 ಸೂತ್ರಗಳು!

ಡಿಜಿಟಲ್ ಕನ್ನಡ ಟೀಮ್:

2022ರ ವೇಳೆಗೆ ದೇಶದ ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಮಾತು ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಕೃಷಿಕರ ಹಿತ ಕಾಯಲು ಈ ಬಾರಿಯ ಬಜೆಟ್ ನಲ್ಲಿ 16 ಸೂತ್ರಗಳನ್ನು ಪ್ರಯೋಗಿಸಲು ಮುಂದಾಗಿದೆ.

ಅವುಗಳೆಂದರೆ…

  1. ಕೃಷಿ ಮಳಿಗೆ, ಕೋಲ್ಡ್ ಸ್ಟೋರೇಜ್ ಇತ್ಯಾದಿ ಸಂಗ್ರಹಗಾರಗಳನ್ನು ಮ್ಯಾಪಿಂಗ್ ಮಾಡಲು ಅಥವಾ ಪರಸ್ಪರ ಕೊಂಡಿ ಏರ್ಪಡಿಸಲು ನಬಾರ್ಡ್ ಕ್ರಮ ಕೈಗೊಳ್ಳಲಿದೆ.
  2. ಮಾದರಿ ಕೃಷಿ ಕಾನೂನುಗಳನ್ನು ಅಳವಡಿಸಲು ರಾಜ್ಯಗಳಿಗೆ ಉತ್ತೇಜನ.
  3. ಗ್ರಾಮ ಸಂಗ್ರಹ ಯೋಜನೆ – ಇದರಿಂದ ರೈತರು ತಮ್ಮ ಉತ್ಪನ್ನಗಳನ್ನು ಕಡಿಮೆ ವೆಚ್ಚದಲ್ಲಿ ಸಂಗ್ರಹಿಸಿಡಲು ಅನುಕೂಲವಾಗುತ್ತದೆ. ಗ್ರಾಮದ ಮಹಿಳೆಯರಿಗೆ ಇದರ ಜವಾಬ್ದಾರಿ ನೀಡಲಾಗುತ್ತದೆ.
  4. ಅತೀವ ಜಲಕ್ಷಾಮ ಇರುವ 100 ಜಿಲ್ಲೆಗಳ ಸಂಕಷ್ಟ ನೀಗಿಸಲು ಸಮಗ್ರ ಕ್ರಮ.
  5. ನಾಗರಿಕ ವಿಮಾನ ಯಾನ ಸಚಿವಾಲಯದಿಂದ ಕೃಷಿ ಉಡಾನ್ ಯೋಜನೆ ಪ್ರಾರಂಭ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಕೃಷಿ ವಿಮಾನ ಯೋಜನೆಯ ಅಳವಡಿಕೆ ಇರುತ್ತದೆ.
  6. ಸೀಮೆ ಎಣ್ಣೆಯ ಮೇಲಿನ ಅವಲಂಬನೆ ಕಡಿಮೆ ಮಾಡಿ ಸೌರ ವಿದ್ಯುತ್ ಬಳಕೆಗೆ ಉತ್ತೇಜಿಸಲು ಪ್ರಧಾನಿ ಕುಸುಮ್ ಯೋಜನೆ.
  7. ಸಮತೋಲಿತವಾಗಿ ರಸಗೊಬ್ಬರ ಬಳಕೆಗೆ ಉತ್ತೇಜನ.
  8. ತೋಟಗಾರಿಕೆ ವಲಯದಲ್ಲಿ ಆಗುತ್ತಿರುವ ಉತ್ಪಾದನೆಯು ಆಹಾರ ಧಾನ್ಯಗಳ ಉತ್ಪನ್ನ ಪ್ರಮಾಣವನ್ನು ಮೀರಿಸಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಎಂಬ ರೀತಿಯಲ್ಲಿ ಇದನ್ನು ಮಾರ್ಪಡಿಸಲಾಗುತ್ತದೆ.
  9. ಕೃಷಿ ಸಂಗ್ರಹಗಾರಗಳ ಸ್ವೀಕೃತಿಗಳನ್ನು ಇತರ ಇ-ಸೇವೆಗಳೊಂದಿಗೆ ಜೋಡಿಸಲಾಗುವುದು.
  10. ಕೃಷಿ ಕ್ಷೇತ್ರಕ್ಕೆ 2021ರವರೆಗೆ 15 ಲಕ್ಷ ಕೋಟಿ ಹಣ ಮೀಸಲಿಡಲಾಗುತ್ತದೆ.
  11. ಕೃಷಿಗೆ 2.83 ಲಕ್ಷ ಕೋಟಿ ವಿನಿಯೋಗ.
  12. ಕುರಿ ಮತ್ತು ಮೇಕೆಗಳನ್ನು ಬಾಧಿಸುವ ಕಾಲುಬಾಯಿ ರೋಗವನ್ನು 2025ರಲ್ಲಿ ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಕ್ರಮ.
  13. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಭಿವೃದ್ಧಿಗೆ 1.23 ಲಕ್ಷ ಕೋಟಿ ರೂ ವಿನಿಯೋಗ.
  14. ದೀನದಯಾಳ್ ಅಂತ್ಯೋದಯ ಯೋಜನೆಯನ್ನು ಬಲಗೊಳಿಸಲಾಗುವುದು.
  15. 2025ರಷ್ಟರಲ್ಲಿ ಹಾಲಿನ ಉತ್ಪನ್ನವನ್ನು 53.5 ದಶಲಕ್ಷ ಮೆಟ್ರಿಕ್ ಟನ್​ನಿಂದ 103 ಮೆಟ್ರಿಲ್ ದಶಲಕ್ಷ ಟನ್​ಗಳಿಗೆ ಹೆಚ್ಚಿಸುವ ಗುರಿ.
  16. ಮೀನುಗಾರಿಕೆ ವಲಯದಲ್ಲಿ ಯುವ ಸಮುದಾಯವನ್ನು ಭಾಗಿಯಾಗಿಸಲು ಕ್ರಮ. ಗ್ರಾಮೀಣ ಯುವಕರು ಸಾಗರ್ ಮಿತ್ರರಾಗಿ ಕಾರ್ಯ ನಿರ್ವಹಿಸುವ ಆಶಯ ಇದೆ. ಮೀನು ರೈತ ಸಂಘದ ಸ್ಥಾಪನೆಗೆ ಕ್ರಮ.

Leave a Reply