ಅನಂತಕುಮಾರ್ ಹೆಗಡೆ ಮಾನಸಿಕ ಅಸ್ವಸ್ಥ: ಡಿಕೆ ಸುರೇಶ್ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್:

ಸಂಸದ ಅನಂತ್ ಕುಮಾರ್ ಹೆಗಡೆ ಮಾನಸಿಕ ಅಸ್ವಸ್ಥರಾಗಿದ್ದು, ಅವರನ್ನು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದು ಉತ್ತಮ ಎಂದು ಸಂಸದ ಡಿಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಪ್ರಗತಿಪರರು ಷಂಡರು ಎಂದು ಅನಂತಕುಮಾರ್ ಹೆಗಡೆ ಅವರು ನೀಡಿದ ಹೇಳಿಕೆಗೆ ಬೆಂಗಳೂರಿನಲ್ಲಿ ಭಾನುವಾರ ತಿರುಗೇಟು ನೀಡಿದರು. ಈ ವೇಳೆ ಅವರು ಹೇಳಿದ್ದಿಷ್ಟು…

‘ಅನಂತ್ ಕುಮಾರ್ ಹೆಗಡೆ ಯಾರಿಗೂ ಬೇಡವಾದ ವಸ್ತು. ಬಿಜೆಪಿಯವರಿಗೂ ಬೇಡವಾಗಿದ್ದಾರೆ. ಅವರನ್ನು ಬೆಂಗಳೂರಿನ ಫೇಮಸ್ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚೆಕ್ ಮಾಡಿಸುವುದು ಒಳಿತು.

ಸ್ವಾತಂತ್ರ್ಯ ಹೋರಾಟಗಾರರು ಇರದೇ ಹೋಗಿದ್ದರೆ ಹೆಗಡೆಗೂ ಮಾತನಾಡುವ ಅವಕಾಶವೇ ಇರುತ್ತಿರಲಿಲ್ಲ. ಬ್ರಿಟಿಷರ ಆಳ್ವಿಕೆ ಅಥವಾ ಹಿಟ್ಲರ್ ಮಾದರಿ ಆಡಳಿತ ಇದ್ದಿದ್ದರೆ, ಹೆಗಡೆಗೂ ಮಾತನಾಡುವ ವಾಕ್ ಸ್ವಾತಂತ್ರ್ಯ ಇರುತ್ತಿರಲಿಲ್ಲ. ಅವರು ಇಷ್ಟೊಂದು ಧೈರ್ಯವಾಗಿ ಮಾತನಾಡುತ್ತಿದ್ದಾರೆ ಅಂದ್ರೆ ಸ್ವಾತಂತ್ರ್ಯ ಹೋರಾಟಗಾರರೇ ಕಾರಣ.

ಹೆಗಡೆ ಅವರನ್ನ ಅವರೇ ಗುರುತಿಸಿಕೊಳ್ಳಬೇಕಿದೆ. ಬಿಜೆಪಿಯವರು ಮತ್ತೆ ಅವರನ್ನು ಕೈ ಹಿಡಿತಾರೇನೋ, ಲೈಮ್ ಲೈಟ್ ಗೆ ಬರಬೇಕು, ಅಧಿಕಾರ ಕೊಡುತ್ತಾರೆ ಅಂತ ಮಾತನಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ನಾಯಕರಿಗೆ ನೈತಿಕತೆ ಇದ್ದರೆ ಅನಂತಕುಮಾರ್ ಹೆಗಡೆಯನ್ನು ವಜಾಗೊಳಿಸಬೇಕು.’

Leave a Reply