ಕೊರೋನಾ ವೈರಸ್ ಮೂರನೇ ಪ್ರಕರಣ ಕಾಸರಗೋಡಿನಲ್ಲಿ ಪತ್ತೆ!

ಡಿಜಿಟಲ್ ಕನ್ನಡ ಟೀಮ್:

ಮಹಾಮಾರಿ ಕೊರೋನಾ ವೈರಸ್ ಭಾರತಕ್ಕೆ ಪ್ರಸಶಿಸಿದ್ದು, ಇದೀಗ ಮೂರನೇ ಪ್ರಕರಣ ಖಚಿತವಾಗಿದೆ. ಕರ್ನಾಟಕ ಮತ್ತು ಕೇರಳ ಗಡಿ ಭಾಗದಲ್ಲಿರುವ ಕಾಸರಗೋಡಿನಲ್ಲಿ 3ನೇ ಪ್ರಕರಣ ಪತ್ತೆಯಾಗಿದೆ.

ಚೀನಾದ ವುಹಾನ್ ಪ್ರದೇಶದಲ್ಲಿ ವೈದ್ಯಕೀಯ ವಿದ್ಯಾರ್ಥಿಗೆ ಸೋಂಕು ತಗಲಿದ್ದು, ಈ ವಿದ್ಯಾರ್ಥಿಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ಬಂದಿದೆ. ಈಗಾಗಲೇ ಪತ್ತೆಯಾಗಿರುವ ಮೂವರು ಸೋಂಕಿತ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಇನ್ನು ಚೀನಾಗೆ ಯಾರು ಪ್ರವಾಸ ಮಾಡಬಾರದು ಎಂದು ಆರೋಗ್ಯ ಸಚಿವಾಲಯ ಸಂದೇಶ ರವಾನಿಸಿದ್ದು, ವೈರಸ್ ನಿಯಂತ್ರಿಸಲು ಚೀನಾದಿಂದ ವಾಪಸ್ ಬರುವ ಪ್ರಯಾಣಿಕರನ್ನು ಪರಿಶೀಲಿಸಲಾಗುತ್ತಿದೆ. ಇನ್ನು ಭಾರತದಲ್ಲಿ 15 ಶಂಕಿತ ಸೋಂಕು ಪ್ರಕರಣಗಳ ಫಲಿತಾಂಶ ಬಾಕಿ ಉಳಿದಿದೆ.

ವಿಶ್ವದ ಚಿತ್ರಣ ನೋಡುವುದಾದರೆ, ಈವರೆಗೂ 14,500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 350ಕ್ಕೂ ಹೆಚ್ಚಿನ ಜನ ಮೃತಪಟ್ಟಿದ್ದಾರೆ.

Leave a Reply