ಚೀನಾದಲ್ಲಿರೋ ವಿದ್ಯಾರ್ಥಿಗಳನ್ನು ವಾಪಸ್ ಬರಬೇಡಿ ಎಂದ ಪಾಕ್!

ಡಿಜಿಟಲ್ ಕನ್ನಡ ಟೀಮ್:

ಚೀನಾದಲ್ಲಿ ಕೊರೋನಾ ವೈರಸ್ ತಾಂಡವವಾಡುತ್ತಿದ್ದು, ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಚೀನಾದಲ್ಲಿರುವ ವಿದ್ಯಾರ್ಥಿಗಳನ್ನು ತಮ್ಮ ದೇಶಕ್ಕೆ ವಾಪಸ್ ಕರೆಸಿಕೊಳ್ಳುತ್ತಿದೆ. ಆದ್ರೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರ, ‘ನೀವು ವಾಪಸ್ ಬರಬೇಡಿ’ ಎಂದು ತನ್ನ ವಿದ್ಯಾರ್ಥಿಗಳಿಗೆ ಹೇಳಿದ್ದು, ಅವರನ್ನು ನಡು ನೀರಲ್ಲಿ ಕೈಬಿಟ್ಟಿದೆ.

ಹೌದು, ಪಾಕಿಸ್ತಾನದಲ್ಲಿ ಈ ವೈರಸ್ ಅನ್ನು ನಿಭಾಯಿಸುವ ವೈದ್ಯಕೀಯ ಸೌಲಭ್ಯಗಳಿಲ್ಲ. ಹೀಗಾಗಿ ಪಾಕಿಸ್ತಾನ ಮೂಲದ ವಿದ್ಯಾರ್ಥಿಗಳು ಮರಳುವುದು ಬೇಡ. ಅವರು ಚೀನಾದಲ್ಲೇ ಇರಲಿ ಎಂದು ಸಂದೇಶ ರವಾನಿಸಲಾಗಿದೆ.

ಈ ವಿಚಾರವಾಗಿ ಮಾತನಾಡಿದ ಪಾಕಿಸ್ತಾನದ ಚೀನಾ ರಾಯಭಾರಿ ನಗ್ಮಾನ ಹಶ್ಮಿ, ‘ಪಾಕಿಸ್ತಾನದಲ್ಲಿ ವೈದ್ಯಕೀಯ ವ್ಯವಸ್ಥೆ ಕೊರತೆ ಇದೆ. ಈ ಸೋಂಕನ್ನು ಎದುರಿಸುವ ವೈದ್ಯಕೀಯ ವ್ಯವಸ್ಥೆ ಚೀನಾದಲ್ಲಿಯೇ ಉತ್ತಮವಾಗಿದೆ. ವುಹಾನ್​ನಲ್ಲಿರುವ ವಿದ್ಯಾರ್ಥಿಗಳು ಆಹಾರ ಕೊರತೆ ಮತ್ತಿತ್ತರ ವಿಷಯದ ಬಗ್ಗೆ ಚಿಂತಿತರಾಗಿದ್ದಾರೆ. ಈ ಬಗ್ಗೆ ಸಂಪೂರ್ಣ ಅರಿವಿದ್ದು, ಅವುಗಳನ್ನು ಪೂರ್ಣಗೊಳಿಸಲು ಚೀನಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದು ತಿಳಿಸಿದ್ದಾರೆ.

ತನ್ನ ದೇಶದ ಪ್ರಜೆಗಳನ್ನು ರಕ್ಷಿಸಿಕೊಳ್ಳದಷ್ಟು ದುಸ್ಥಿತಿಗೆ ಪಾಕಿಸ್ತಾನ ಬಂದು ತಲುಪಿರುವುದಕ್ಕೆ ಈ ಬೆಳವಣಿಗೆ ಸಾಕ್ಷಿಯಾಗಿದೆ.

Leave a Reply