ಪ್ರಮಾಣ ವಚನ ಕಾರ್ಯಕ್ರಮಕ್ಕೆ ನಾಯಕರ ಗೈರು! ಬಿಜೆಪಿಯಲ್ಲಿ ಶುರುವಾಯ್ತಾ ‘ಮೂಲ’ವ್ಯಾದಿ?

ಡಿಜಿಟಲ್ ಕನ್ನಡ ಟೀಮ್:

ಇಂದು ನಡೆದ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಶ್ರೀರಾಮುಲು, ಈಶ್ವರಪ್ಪ ಸೇರಿದಂತೆ 20ಕ್ಕೂ ಬಿಜೆಪಿ ನಾಯಕರು ಭಾಗಿಯಾಗದಿರುವುದು ಅಸಮಾಧಾನದ ಪರಿಣಾಮವೇ? ಎಂಬ ಪ್ರಶ್ನೆ ಮೂಡಿದೆ.

ಉಪಮುಖ್ಯಮಂತ್ರಿ ಹುದ್ದೆ ಕನವರಿಸುತ್ತಿದ್ದ ಆರೋಗ್ಯ ಸಚಿವ ಶ್ರೀರಾಮುಲುಗೆ ಈ ಬಾರಿಯೂ ನಿರಾಸೆಯಾಗಿದೆ. ಇನ್ನು ವಲಸಿಗರ ಬಗ್ಗೆ ಯಡಿಯೂರಪ್ಪ ತೋರುತ್ತಿರುವ ಅತಿಯಾದ ಮುತುವರ್ಜಿ ಮೂಲ ನಾಯಕರ ಹೊಟ್ಟೆಗೆ ಬೆಂಕಿ ಹಾಕಿದೆ.

ಮೊದಲು 10+3 ಸೂತ್ರದ ಪ್ರಕಾರ 10 ನೂತನ ಶಾಸಕರು ಹಾಗೂ 3 ಮೂಲ ಬಿಜೆಪಿಗರು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಆದರೆ, ಯೋಗೇಶ್ವರ್ ಸೇರ್ಪಡೆ ಹಿನ್ನೆಲೆಯಲ್ಲಿ ನಡೆದ ಬಹಿರಂಗ ಅಸಮಾಧಾನ ಮೂಲ ಬಿಜೆಪಿಗರ ಪಟ್ಟಾಭಿಷೇಕಕ್ಕೆ ತಡೆಹಿಡಿಯುವಂತೆ ಮಾಡಿತು.

ಇಷ್ಟು ವರ್ಷಗಳ ಕಾಲ ಪಕ್ಷಕ್ಕಾಗಿ ತನು, ಮನ, ಧನವನ್ನು ಅರ್ಪಿಸಿ ನಿಷ್ಠಾವಂತರಾಗಿ ದುಡಿದವರಿಗಿಂತ ಮೊನ್ನೆ ಬಂದವರಿಗೆ ಮೊದಲ ಆದ್ಯತೆ ನೀಡುತ್ತಿರುವುದು ಬಿಜೆಪಿಯಲ್ಲಿ ಅಸಮಾದಾನದ ಮೊಳಕೆ ಚಿಗುರುತ್ತಿದೆ.

ಈ ಮೊಳಕೆ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯುತ್ತದೆ, ಇದನ್ನು ಯಡಿಯೂರಪ್ಪ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

Leave a Reply