‘ದೆಹಲಿ ದಂಗಲ್’ ನಲ್ಲಿ ಕೇಜ್ರಿವಾಲ್ ಕ್ರೇಜ್ ಮುಂದೆ ಬಿಜೆಪಿಗೆ ಮಂಕು: ಚುನಾವಣೋತ್ತರ ಸಮೀಕ್ಷೆ

ಡಿಜಿಟಲ್ ಕನ್ನಡ ಟೀಮ್:

ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಇಂದು ಮತದಾನ ನಡೆದಿದ್ದು, ಶೇ.54.65 ರಷ್ಟು ಮತದಾನ ನಡೆದಿದೆ. ಮತದಾನ ಮುಕ್ತಾಯದ ನಂತರ ಚುನಾವಣೋತ್ತರ ಸಮೀಕ್ಷೆ ವರದಿ ಪ್ರಕಟವಾಗಿದ್ದು ಎಲ್ಲ ಸಮೀಕ್ಷೆಗಳು ಆಪ್ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ.

ಟೈಮ್ಸ್ ನೌ ವರದಿ ಪ್ರಕಾರ ಆಪ್ 47, ಬಿಜೆಪಿ 23, ಕಾಂಗ್ರೆಸ್ 00 ಹಾಗೂ ಇತರೆ 00 ಸ್ಥಾನ ಪಡೆಯಲಿವೆ.

ನ್ಯೂಸ್ ಎಕ್ಸ್- ಜೆನ್ ಕಿ ಬಾತ್ ಸಮೀಕ್ಷೆ ಪ್ರಕಾರ ಆಪ್ 48-61, ಬಿಜೆಪಿ 09-21, ಕಾಂಗ್ರೆಸ್ 00-01 ಹಾಗೂ ಇತರೆ 00 ಸ್ಥಾನ ಪಡೆಯಲಿವೆ.

ಸಿ ವೋಟರ್ ಸಮೀಕ್ಷೆ ಪ್ರಕಾರ ಆಪ್ 49-63, ಬಿಜೆಪಿ 05-19, ಕಾಂಗ್ರೆಸ್ 00-04 ಹಾಗೂ ಇತರೆ 00 ಸ್ಥಾನ ಪಡೆಯಲಿವೆ.

ಸುದರ್ಶನ್ ಸಮೀಕ್ಷೆ ಪ್ರಕಾರ ಆಪ್ 40-45, ಬಿಜೆಪಿ 24-28, ಕಾಂಗ್ರೆಸ್ 02-03 ಹಾಗೂ ಇತರೆ 00 ಸ್ಥಾನ ಪಡೆಯಲಿವೆ.

Leave a Reply