ಡಿಜಿಟಲ್ ಕನ್ನಡ ಟೀಮ್:
ವಿಶ್ವದ ಚಿತ್ರ ರಸಿಕರ ಮನಗೆದ್ದ ಕೆಜಿಎಫ್ ಚಿತ್ರದ ಮುಂದುವರಿದ ಭಾಗ ಈಗಾಗಲೇ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದ್ದು, ಮೈಸೂರು ಹಾಗೂ ಬಳ್ಳಾರಿಯಲ್ಲಿ ಶೂಟಿಂಗ್ ನಡೆಯುತ್ತಿದೆ.
ಚಿತ್ರದಲ್ಲಿ ಈಗಾಗಲೇ ಬಾಲಿವುಡ್ ನಟ ಸಂಜಯ್ ದತ್ ಶೂಟಿಂಗ್ ನಡೆದಿದ್ದು, ಮತ್ತೊಬ್ಬ ತಾರೆ ರವಿನಾ ಟಂಡನ್ ಅವರು ಈಗ ಶೂಟಿಂಗ್ ಗೆ ಆಗಮಿಸಿದ್ದಾರೆ. ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್, ಇನ್ಫೋಸಿಸ್ ಕಚೇರಿಯಲ್ಲಿ ಶೂಟಿಂಗ್ ಮಾಡುತ್ತಿರುವ ವೇಳೆ ರವಿನಾ ಟಂಡನ್ ಅವರ ಫೋಟೋವನ್ನು ಚಿತ್ರ ತಂಡ ಹಾಕಿದೆ.
ಈ ಚಿತ್ರದ ಮೂಲಕ ರವಿನಾ ಅವರು ದಶಕಗಳ ಬಳಿಕ ಮತ್ತೆ ಚಂದನವನಕ್ಕೆ ಮರಳಿದ್ದಾರೆ. ಉಪೇಂದ್ರ ಚಿತ್ರದಲ್ಲಿ ಮಸ್ತ್ ಮಸ್ತ್ ಹುಡುಗಿಯಾಗಿ ಹೆಜ್ಜೆ ಹಾಕಿದ್ದ ರವಿನಾ ಕೆಜಿಎಫ್ 2 ಚಿತ್ರದಲ್ಲಿ ಭಾರತದ ಪ್ರಧಾನಿಯಾಗಿ ರಮಿಕಾ ಸೇನ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಕಿಭಾಯ್ ಗೆ ಇವರು ಡೆತ್ ವಾರೆಂಟ್ ಬರೆಯುವುದು ಕೆಜಿಎಫ್ ಮೊದಲ ಭಾಗದಲ್ಲೇ ಗೊತ್ತಾಗಿದ್ದು, ಚಿತ್ರದಲ್ಲಿ ರಾಕಿಭಾಯ್ ಅಂಡರ್ ವರ್ಲ್ಡ್ ಜತೆಗೆ ರಾಜಕೀಯ ನಾಯಕರಿಗೆ ಹೇಗೆ ಕಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ.