ಖಾತೆ ಹಂಚಿಕೆ: ಜಾರಕಿಹೊಳಿಗೆ ಜಲಸಂಪನ್ಮೂಲ ಜತೆಗೆ ಬೆಳಗಾವಿ ಉಸ್ತುವಾರಿ!

ಡಿಜಿಟಲ್ ಕನ್ನಡ ಟೀಮ್:

ಆಪರೇಷನ್ ಕಮಲಕ್ಕೆ ದೋಸ್ತಿ ಶಾಸಕರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದ ರಮೇಶ್ ಜಾರಕಿಹೊಳಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ಅವರು ನಿರೀಕ್ಷಿಸಿದ್ದ ಜಲಸಂಪನ್ಮೂಲ ಖಾತೆ ನೀಡುವುದರ ಜತೆಗೆ ಬೆಳಗಾವಿ ಉಸ್ತುವಾರಿ ಸಚಿವ ಸ್ಥಾನವನ್ನೂ ನೀಡಲಾಗಿದೆ.

ಉಳಿದಂತೆ ಶಿವರಾಮ್ ಹೆಬ್ಬಾರ್ ಅವರಿಗೆ ಪೌರಾಡಳಿತ, ಬಿ.ಸಿ ಪಾಟೀಲ್ ಗೆ ಇಂಧನ, ನಾರಾಯಣಗೌಡಗೆ ಆಹಾರ ಮತ್ತು ನಾಗರೀಕ ಸರಬರಾಜು, ಶ್ರೀಮಂತ ಪಾಟೀಲ್ ಗೆ ಸಕ್ಕರೆ ಹಾಗೂ ಕೆ.ಸುಧಾಕರ್ ಗೆ ವೈದ್ಯಕೀಯ, ಎಸ್.ಟಿ ಸೋಮಶೇಖರ್ ಗೆ ಸಹಕಾರ, ಭೈರತಿ ಬಸವರಾಜು ಅವರಿಗೆ ನಗರಾಭಿವೃದ್ಧಿ, ಗೋಪಾಲಯ್ ಅವರಿಗೆ ಕಾರ್ಮಿಕ, ಆನಂದ್ ಸಿಂಗ್ ಅವರಿಗೆ ಗಣಿ ಮತ್ತು ಭೂ ವಿಜ್ಞಾನ, ಯುವಜನ ಮತ್ತು ಕ್ರೀಡೆ ಖಾತೆ ನೀಡಲಾಗಿದೆ.

Leave a Reply