ಡಿಜಿಟಲ್ ಕನ್ನಡ ಟೀಮ್:
ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ದೆಹಲಿ ವಿಧಾನಸಭಾ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಚುನಾವಣಾ ಸಮೀಕ್ಷೆಗಳಂತೆ ಮತ್ತೊಮ್ಮೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಅಧಿಕಾರಕ್ಕೆ ಬರುವ ಸೂಚನೆ ದತ್ತವಾಗುತ್ತಿದೆ.
ಇನ್ನು ಆಪ್ ವಿರುದ್ಧ ಟೀಕಾ ಪ್ರಹಾರ ಮಾಡುವ ಬಿಜೆಪಿಯ ಚುನಾವಣಾ ಗಿಮಿಕ್ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲು ನೆರವಾಯಿತೇ ಹೊರತು ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ.
ಇನ್ನು ಕಾಂಗ್ರೆಸ್ ಮುಕ್ತ ದೆಹಲಿ ಸಾಧ್ಯವಾಯಿತೆ ಎಂಬಷ್ಟರ ಮಟ್ಟಿಗೆ ಕೈ ಪಾಳಯ ನೆಲ ಕಚ್ಚಿದ್ದು, ಒಂದೇ ಒಂದು ಸೀಟು ಗೆಲ್ಲಲು ಸಾಧಾವಾಗದ ಹಂತಕ್ಕೆ ಬಂದು ನಿಂತಿದೆ.
ಸದ್ಯದ ಮಾಹಿತಿ ಪ್ರಕಾರ, ಆಪ್ ಸುಮಾರು 50-55 ಆಸುಪಾಸಿನಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 15-20 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಉಳಿದಂತೆ ಕಾಂಗ್ರೆಸ್ ಹಾಗೂ ಇತರೆ ಯಾವುದೇ ಅಭ್ಯರ್ಥಿಗಳು ಒಂದೇ ಒಂದು ಸ್ಥಾನದಲ್ಲೂ ಮುನ್ನಡೆ ಸಾಧಿಸಿಲ್ಲ.