ಇದ್ದಕ್ಕಿದ್ದಂತೆ ಮಾಯವಾಯ್ತು ಅಸ್ಸಾಂ ಎನ್ ಸಿಆರ್ ಅಂಕಿಅಂಶ! ಇದಕ್ಕೆ ಕಾರಣ ಏನು?

ಡಿಜಿಟಲ್ ಕನ್ನಡ ಟೀಮ್:

ಅಸ್ಸಾಂನಲ್ಲಿ ನಡೆದ ರಾಷ್ಟ್ರೀಯ ಪೌರತ್ವ ನೋಂದಣಿಯ ಅಂಕಿಅಂಶಗಳು ಕ್ಲೌಡ್ ಹಾಗೂ ತನ್ನ ಅಧಿಕೃತ ಜಾಲತಾಣದಿಂದ ಇದ್ದಕ್ಕಿದ್ದಂತೆ ಮಾಯವಾಗಿವೆ.

ಈ ಅಂಕಿಅಂಶಗಳ ನಾಪತ್ತೆ ಅಚ್ಚರಿ ಮೂಡಿಸಿದ್ದು, ಇದು ತಾಂತ್ರಿಕ ದೋಷ ಅಂತಾ ಕೇಂದ್ರ ಗೃಹ ಸಚಿವಾಲಯ ಸಮಜಾಯಿಷಿ ನೀಡುತ್ತಿದೆ. ಜತೆಗೆ ಎನ್ ಸಿಆರ್ ಅಂಕಿಅಂಶಗಳು ಸುರಕ್ಷಿತವಾಗಿವೆ. ಈ ತಾಂತ್ರಿಕ ತೊಂದರೆ ನಿವಾರಣೆ ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿದೆ.

ಇನ್ನು ಎನ್ಸಿಆರ್ ಅಧಿಕಾರಿಗಳ ಪ್ರಕಾರ ಐಟಿ ಸಂಸ್ಥೆ ವಿಪ್ರೋ ಜತೆಗಿನ ಒಪ್ಪಂದ ನವೀಕರಣವಾಗದ ಕಾರಣದಿಂದ ಈ ಅಂಕಿಅಂಶಗಳು ಅಧಿಕೃತ ಜಾಲತಾಣದಿಂದ ಮಾಯವಾಗಿದೆ ಎಂದಿದ್ದಾರೆ.

ವಿವಾದಿತ ಎನ್ಸಿಆರ್ ಪಟ್ಟಿಯಲ್ಲಿ ಮಾಜಿ ರಾಷ್ಟ್ರಪತಿ ಹಾಗೂ ಮಾಜಿ ಮುಖ್ಯಮಂತ್ರಿಗಳ ಕುಟುಂಬ ಸದಸ್ಯರ ಹೆಸರೇ ನಾಪತ್ತೆಯಾಗಿರುವ ಸುದ್ದಿ ಈ ಎನ್ಸಿಆರ್ ಪ್ರಕ್ರಿಯೆ ಹಾಗೂ ಪಾರದರ್ಶಕತೆ ಮೇಲೆ ಪ್ರಶ್ನೆ ಮೂಡುವಂತೆ ಮಾಡಿತ್ತು. ಇದರ ಬೆನ್ನಲ್ಲೇ ಅಂಕಿಅಂಶಗಲ ನಾಪತ್ತೆ ಸುದ್ದಿ ಅಚ್ಚರಿ ಮೂಡಿಸಿದೆ.

Leave a Reply