ಭಾರತದಲ್ಲಿ ಮತ್ತೆರಡು ಕೊರೋನಾ ವೈರಸ್ ಸೋಂಕು ಪತ್ತೆ!

ಡಿಜಿಟಲ್ ಕನ್ನಡ ಟೀಮ್:

ಬ್ಯಾಂಕಾಕ್ ನಿಂದ ಕೋಲ್ಕತ್ತಾದ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಇಬ್ಬರು ಪ್ರಯಾಣಿಕರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ವೈದ್ಯಕೀಯ ಪರೀಕ್ಷೆ ಖಚಿತಪಡಿಸಿವೆ. ಇದರೊಂದಿಗೆ ಮತ್ತೆ ಆತಂಕ ಹೆಚ್ಚಿದೆ.

ಈ ಹಿಂದೆ ಕೇರಳದಲ್ಲಿ ಚೀನಾದಿಂದ ವಾಪಸ್ಸಾದ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿತ್ತು. ನಂತರ ಅವರನ್ನು ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆ ಹೊಸ ಪ್ರಕಾರಣ ಆತಂಕ ಹೆಚ್ಚಿಸಿದೆ.

ನೂತನ ಪ್ರಕರಣಗಳ ಕುರಿತು ಮಾಹಿತಿ ನೀಡಿರುವ ವಿಮಾನ ನಿಲ್ದಾಣದ ನಿರ್ದೇಶಕ ಕೌಶಿಕ್ ಭಟ್ಟಾಚಾರ್ಯಜೀ, ‘ಹಿಮಾದ್ರಿ ಬರ್ಮನ್ ಎಂಬ ಪ್ರಯಾಣಿಕರಿಗೆ ಸೋಂಕು ತಗುಲಿದೆ ಎಂದು ಮಂಗಳವಾರ ನಡೆಸಲಾದ ಪರೀಕ್ಷೆಯಲ್ಲಿ ಖಚಿತವಾದರೆ, ನಾಗೇಂದ್ರ ಸಿಂಗ್ ಎಂಬುವವರು ಸೋಂಕು ತಗುಳಿರುವುದು ಬುಧವಾರದ ಪರೀಕ್ಷೆಯಲ್ಲಿ ಗೊತ್ತಾಗಿದೆ.

ಇನ್ನು ಬ್ಯಾಂಕಾಕ್ ಹಾಗೂ ದೆಹಲಿ ನಡುವಣ ಸ್ಪೈಸ್ ಜೆಟ್ ವಿಮಾನದ ಪ್ರಯಾಣಿಕನಿಗೆ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ.

ಇನ್ನು ಚೀನಾದಲ್ಲಿ ವೈರಸ್ ಸೋಂಕಿನಿಂದ 1355 ಜನ ಸತ್ತಿದ್ದು, 60 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಚೀನಾದ ಆರೋಗ್ಯ ಸಮಿತಿಯ ಖ್ಯಾತ ವಿಜ್ಞಾನಿ ಜ್ಹೊಂಗ್ ನಂಶಾನ್ ಅವರು ಫೆಬ್ರವರಿ ತಿಂಗಳ ಮಧ್ಯ ಭಾಗದಿಂದ ಅಂತ್ಯದವರೆಗೆ ವೈರಸ್ ಪ್ರಕರಣ ಹೆಚ್ಚಾಗಲಿದೆ ಎಂದು ಊಹಿಸಿದ್ದಾರೆ.

Leave a Reply