ಫೆ.14ರಂದು ಆರ್ ಸಿಬಿಗೆ ಹೊಸ ರೂಪ! ಇದು ಚರಿತ್ರೆ ಸೃಷ್ಟಿಸೋ ಅವತಾರನಾ?

ಡಿಜಿಟಲ್ ಕನ್ನಡ ಟೀಮ್:

ರಾಯಲ್ ಚಾಲೆಂಜರ್ಸ್ ಬೆಂಗಳೂರು- ಆರ್ ಸಿಬಿ ಈಗ ಹೊಸ ರೂಪ ಪಡೆಯಲು ಸಜ್ಜಾಗಿದೆ. ಇತ್ತೀಚಿಗೆ ತನ್ನ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಗೂ ಪೋಸ್ಟ್ ಗಳನ್ನು ಡಿಲೀಟ್ ಮಾಡಿ ಎಲ್ಲರಲ್ಲೂ ಕುತೂಹಲ ಮೂಡಿಸಿರುವ ಪ್ರಾಂಚೈಸಿಗಳು ಇದೇ ಫೆ.14ರಂದು ಸಿಹಿ ಸುದ್ದಿ ನೀಡುವುದಾಗಿ ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ತಂಡ New Decade, New RCB (ಹೊಸ ದಶಕ, ಹೊಸ ಆರ್ ಸಿಬಿ) ಎಂಬ ಸಂದೇಶ ರವಾನಿಸಿದ್ದು, ಫೆ.14ರ ದಿನಕ್ಕಾಗಿ ಕಾತುರರಾಗಿರಿ ಎಂದು ತಿಳಿಸಿದೆ. ಇದು ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಹೆಚ್ಚಿಸಿದೆ.

ಆರ್ ಸಿಬಿ ಹೊಸ ರೂಪ ಹೇಗಿರುತ್ತದೆ? ಜೆರ್ಸಿ, ತಂಡದ ಲೋಗೋ ಬರುತ್ತಾ? ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ರಾಯಲ್ ಚಾಲೆಂಜರ್ಸ್ ಎಂದು ಇದ್ದ ಹೆಸರು ಅಭಿಮಾನಿಗಳ ಒತ್ತಾಯದ ಮೇರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಾ ಬದಲಾಗುತ್ತಾ? ಈ ಹೊಸ ರೂಪ ಐಪಿಎಲ್ ನಲ್ಲಿ ತಂಡದ ಹಣೆಬರಹವನ್ನು ಬಡಳಿಸುತ್ತಾ? ತಂಡ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾ? ಈ ಎಲ್ಲ ಪ್ರಶ್ನೆಗಳು ಅಭಿಮಾನಿಗಳ ಮಿದುಳನ್ನು ತಿನ್ನುತ್ತಿವೆ.

ಈ ಮಧ್ಯೆ ತಂಡದಲ್ಲಿನ ಈ ಬದಲಾವಣೆಗಳ ಕುರಿತು ಸ್ವತಃ ನಾಯಕ ವಿರಾಟ್ ಕೊಹ್ಲಿ ಹಾಗೂ ಆಟಗಾರರಿಗೆ ತಿಳಿದಿಲ್ಲ. ತಂಡದ ಸಾಮಾಜಿಕ ಜಾಲತಾಣಗಳಲ್ಲಿನ ಬದಲಾವಣೆ ಕಂಡು ಆಟಗಾರರು ಅಚ್ಚರಿ ವ್ಯಕ್ತಪಡಿಸಿರೋದು ಹೀಗೆ…

 

 

Leave a Reply