ನೂತನ ಸಚಿವ ಆನಂದ್ ಸಿಂಗ್ ಗೆ ಮತ್ತೆ ಖಾತೆ ಬದಲಾವಣೆ?

ಡಿಜಿಟಲ್ ಕನ್ನಡ ಟೀಮ್:

ಬಳ್ಳಾರಿ ಜಿಲ್ಲೆ ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಆನಂದ್ ಸಿಂಗ್, ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದಾರೆ. ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಕೊಟ್ಟಿದ್ದ ಯಡಿಯೂರಪ್ಪ, ಆನಂದ್ ಸಿಂಗ್ ಮುನಿಸಿಗೆ ಮಣಿದು ಅರಣ್ಯ ಇಲಾಖೆ ಜವಾಬ್ದಾರಿ ವಹಿಸಿದ್ದಾರೆ. ಈ ಬೆಳವಣಿಗೆ ರಾಷ್ಟ್ರಮಟ್ಟದಲ್ಲಿ ಮುಜುಗರ ಉಂಟುಮಾಡಿದೆ.

ಈಗಾಗಲೇ ಸಚಿವ ಆನಂದ್ ಸಿಂಗ್ ವಿರುದ್ಧ ಅರಣ್ಯ ಇಲಾಖೆ ದೂರು‌ ದಾಖಲಿಸಿದೆ.‌ ಆನಂದ್ ಸಿಂಗ್ ವಿರುದ್ಧ ದೂರುಗಳಿದ್ರೂ ಇಲಾಖೆ ಜವಾಬ್ದಾರಿ ಕೊಟ್ಟಿರುವ ಕ್ರಮಕ್ಕೆ ಖಂಡನೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಮೇಲಿನ ಪ್ರಕರಣಗಳ ಸಂಬಂಧ ಮಾಹಿತಿ ಕೊಡುವಂತೆ ಬಿಜೆಪಿ ಹೈಕಮಾಂಡ್ ಕೂಡ ಮಾಹಿತಿ ಪಡೆದಿದ್ದು, ಆನಂದ್ ಸಿಂಗ್ ಅವರಿಗೆ ಈ ಖಾತೆ ನೀಡಿರುವುದಕ್ಕೆ ಗರಂ ಆಗಿದೆ.

ಇದರ ಬೆನ್ನಲ್ಲೇ ಆನಂದ್ ಸಿಎಂ ಸಿಎಂ ಯಡಿಯೂರಪ್ಪ ಜೊತೆಗೆ ಚರ್ಚಿಸಿದ್ದಾರೆ. ಸಚಿವ ಆನಂದ್ ಸಿಂಗ್ ವಿರುದ್ಧ 20 ಪ್ರಕರಣಗಳು ದಾಖಲಾಗಿದ್ದು. ಅದರಲ್ಲಿ ಆನಂದಸಿಂಗ್ ಮೇಲೆ ಪ್ರಕರಣಗಳನ್ನು ಅರಣ್ಯ ಇಲಾಖೆಗೆ ಸೇರಿದ್ದವು ಎನ್ನಲಾಗಿದೆ. ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದಲ್ಲಿ ಸಿಎಂ ಭೇಟಿಯಾಗಿ ಆನಂದ ಸಿಂಗ್ ಸಮಜಾಯಿಷಿ ಕೊಡುವ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಆನಂದ್ ಸಿಂಗ್ ಅರಣ್ಯ ಭೂಮಿ ಕಬಳಿಸಿ ಅಕ್ರಮ ಗಣಿಗಾರಿಕೆ ಮಾಡಿ ಜೈಲಿಗೆ ಹೋಗಿ ಬಂದವರು. ಅವರ ವಿರುದ್ಧ 15 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಅವರಿಗೆ ಅರಣ್ಯ ಖಾತೆ ಕೊಡ್ತೀರಾ ಅಂದ್ರೆ ನಿಮ್ಮ ಉದ್ದೇಶ ಏನು.? ಕೂಡಲೇ ಆನಂದ್ ಸಿಂಗ್ ಅವರಿಂದ ಅರಣ್ಯ ಖಾತೆ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಉಗ್ರ ಹೋರಾಟ ನಡೆಸಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಕಾಂಗ್ರೆಸ್ ಎಂಎಲ್‌ಸಿ ಹಾಗು ಬಳ್ಳಾರಿ ಕಾಂಗ್ರೆಸ್ ಮುಖಂಡ ಕೆ ಸಿ ಕೊಂಡಯ್ಯ ಮಾತನಾಡಿ, ಆನಂದ್ ಸಿಂಗ್ ವಿರುದ್ಧ ಅರಣ್ಯ ಇಲಾಖೆ ಕೇಸ್ ಇದ್ದಾಗಲೂ ಅದೇ ಇಲಾಖೆ ಸಚಿವರನ್ನಾಗಿ ಮಾಡಿದ್ದು ಸರಿಯಲ್ಲ. ಇದೇ ವಿಚಾರವನ್ನಿಟ್ಟುಕೊಂಡು ಸದನದಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್ ಸಜ್ಜಾಗಿದೆ. ಈ ಬಗ್ಗೆ ರಾಜಕೀಯವಾಗಿಯೂ ಹೋರಾಟ ಮಾಡಲು ಸಿದ್ಧತೆ ಮಾಡಿಕೊಳ್ತಿದೆ. ಸಿಎಂಗೆ ಎಲ್ಲಾ ಕೇಸ್ ಬಗ್ಗೆ ಗೊತ್ತಿದ್ದಾಗಲೂ ಇಲಾಖೆ ಕೊಟ್ಟಿರಬಹುದು. ನೈತಿಕವಾಗಿ ಸಚಿವ ಸ್ಥಾನ ನೀಡಿದ್ದು ಎಷ್ಟು ಸರಿ ಅಂತಾ ಕೇಳ್ತೇವೆ.‌ ನಾನು ಕೂಡ ಬಳ್ಳಾರಿಯಲ್ಲಿ ಜನಾರ್ದನರೆಡ್ಡಿ ವಿರುದ್ಧ ,ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದ್ದೇನೆ ಎಂದಿದ್ದಾರೆ.

ಸಿಎಂ ಭೇಟಿ ಮಾತನಾಡಿದ ಮಾತನಾಡಿದ ಆನಂದ್ ಸಿಂಗ್, ದೇಶದ ನ್ಯಾಯಾಲಯಗಳು, ತನಿಖಾ ಸಂಸ್ಥೆಗಳು ತಮ್ಮ ಕೆಲಸ ಮಾಡ್ತಿವೆ. ಅರಣ್ಯ ನಾಶ ಮಾಡಿದ್ದೀಯಾ..? ಒತ್ತುವರಿ ಮಾಡಿದ್ದೀಯಾ..? ಅನ್ನೋ ಕೇಸ್‌ಗಳಿಲ್ಲ. ಆ ಕೇಸ್‌ಗಳು ರಾಜಕೀಯವಾಗಿ ಆಗಿವೆ ಅಂತಾ ನಾನು ಹೇಳಲಿಕ್ಕೆ ಹೋಗಲ್ಲ. ನನ್ನ ಮೇಲೆ ಆರೋಪ ಮಾಡುವ ಕಾಂಗ್ರೆಸ್ ಹಿರಿಯ ಮುಖಂಡರನ್ನು ಕ್ವೀನ್ಸ್ ರಸ್ತೆಯ ಕಚೇರಿಯಿಂದ ಹೊರ ಹಾಕ್ತಾರೆ ಅನ್ನೋ ಕಾರಣಕ್ಕೆ ನನ್ನ ಬಗ್ಗೆ ಮಾತಾಡ್ತಾರೆ. ಮಹರ್ಷಿ ವಾಲ್ಮೀಕಿ ಹುಟ್ಟಿನಿಂದ ಹೇಗಿದ್ರೂ ಅಂತಾ ಗೊತ್ತು ಬಳಿಕ ಇಡೀ ಜಗತ್ತೇ ನೋಡುವ ಹಾಗೆ ರಾಮಾಯಣ ಬರೆದ್ರು. ತಪ್ಪು ಮಾಡಿದವರು ಸರಿ ಹೋಗಬಾರದಾ..? ಗ್ರೂಪ್ ಅಫೆನ್ಸ್‌ನಲ್ಲಿ ಕೇಸ್‌ಗಳಿವೆ. ಆದ್ರೆ ಅರಣ್ಯ ಇಲಾಖೆಗೆ ಸಂಬಂಧ ಪಟ್ಟ ಕೇಸ್‌ಗಳಿಲ್ಲ ಎಂದಿದ್ದಾರೆ.

ಈ ಬಗ್ಗೆ ಲೋಕಾಯುಕ್ತ ನಿವೃತ್ತ ನ್ಯಾ,ಸಂತೋಷ್ ಹೆಗ್ಡೆ ಪ್ರತಿಕ್ರಿಯೆ ಕೊಟ್ಟಿದ್ದು, ನನ್ನ ಅನಿಸಿಕೆಯಲ್ಲಿ ಇದು ದೊಡ್ಡ ತಪ್ಪು. ಅವರೇ ಕೊಟ್ಟಿರೋ ಅಫಿಡವಿಟ್ ಪ್ರಕಾರ ಕೆಲ ಕೇಸ್‌ಗಳು ಅವರ ಮೇಲಿವೆ. ಅದ್ರಲ್ಲಿ ಅರಣ್ಯ ಕೇಸ್ ಗಳೂ ಇವೆ. ಅರಣ್ಯ ಖಾತೆ ಕೊಟ್ಟಿರೋದು ತಪ್ಪು‌. ಅರಣ್ಯ ಖಾತೆ ಕೊಟ್ರೆ , ಅಧಿಕಾರಿಗಳು ತನಿಖೆ ನಡೆಸೋದಕ್ಕೆ ಆಗುತ್ತಾ‌..? ಎಂದು ಪ್ರಶ್ನಿಸಿರುವ ಸಂತೋಷ್ ಹೆಗಡೆ, ಬೇರೆ ಖಾತೆ ಕೊಡಲಿ ಎಂದು ಸಲಹೆ ಕೊಟ್ಟಿದ್ದಾರೆ. ಒಟ್ಟಾರೆ, ಆಹಾರ ಖಾತೆ ಸೈಡಿಗೆ ತಳ್ಳಿ ಅರಣ್ಯ ಖಾತೆ ಪಡೆದುಕೊಂಡ ಆನಂದ್‌ ಸಿಂಗ್‌ಗೆ ವಿವಾದ ವಿವಾದ ಮೆತ್ತಿಕೊಂಡಿದೆ. ಮುಂದೆ ಖಾತೆ ಬದಲಾವಣೆ ಆದರೂ ಅಚ್ಚರಿಯೇನಲ್ಲ.

Leave a Reply