ಉಸೇನ್ ಬೋಲ್ಟ್ ಮೀರಿಸಿದ ಶ್ರೀನಿವಾಸ ಗೌಡಗೆ ಒಲಿಂಪಿಕ್ಸ್ ಅವಕಾಶ?

ಡಿಜಿಟಲ್ ಕನ್ನಡ ಟೀಮ್:

ಮೂಡಿಬಿಡರೆಯ ಮೂಲದ ಶ್ರೀನಿವಾಸ ಗೌಡ ಫೆ.1ರಂದು ನಡೆದ ಕಂಬಳ ಸ್ಪರ್ಧೆಯಲ್ಲಿ 142.5 ಮೀಟರ್ ಅನ್ನು ಕೇವಲ 13.62 ಸೆಕೆಂಡ್ ಗಳಲ್ಲಿ ಓಡಿದ್ದು, ಈತ ಈಗ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಬಗ್ಗೆ ಕೇಂದ್ರ ಸಚಿವ ಕಿರಣ್ ರಿಜಿಜು ಮಾತನಾಡಿದ್ದಾರೆ.

ಸುದ್ದಿ ಸಂಸ್ಥೆಗೆ ನೀಡಿರುವ ಹೇಳಿಕೆಯಲ್ಲಿ, ‘ನಾನು ಶ್ರೀನಿವಾಸ ಗೌಡ ಅವರನ್ನು ಕರೆಸಿ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ದ ಪ್ರಮುಖ ಕೋಚ್ ಗಳ ಮುಂದೆ ಟ್ರಯಲ್ಸ್ ಕೊಡಿಸುತ್ತೇವೆ. ನಮ್ಮಲ್ಲಿ ಅನೇಕರಿಗೆ ಒಲಿಂಪಿಕ್ಸ್ ಕ್ರೀಡಾಕೂಟದ ಗುಣಮಟ್ಟದ ಬಗ್ಗೆ ಸ್ಪಷ್ಟ ಮಾಹಿತಿಯ ಕೊರತೆ ಇದೆ. ಇಲ್ಲಿ ವ್ಯಕ್ತಿಯ ಸಾಮರ್ಥ್ಯ ಪ್ರಮುಖವಾಗಿದ್ದು, ದೇಶದ ಯಾವುದೇ ಪ್ರತಿಭೆಯನ್ನು ಪರೀಕ್ಷಿಸದೆ ವ್ಯರ್ಥವಾಗಲು ಬಿಡುವುದಿಲ್ಲ ಎಂದು ತಿಳಿಸಿದರು.

ಇದರೊಂದಿಗೆ ಟ್ರ್ಯಾಕ್ ಓಟದಲ್ಲಿ ಶ್ರೀನಿವಾಸ ಗೌಡ ತನ್ನ ಸಾಮರ್ಥ್ಯ ಸಾಬೀತು ಪಡಿಸಿದರೆ ಒಲಿಂಪಿಕ್ಸ್ ಹಾದಿ ಸುಗಮವಾಗಲಿದೆ.

ಇನ್ನು ತನ್ನನ್ನು ಉಸೇನ್ ಬೋಲ್ಟ್ ಜತೆ ಹೋಲಿಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸ ಗೌಡ, ‘ನಾನು ಕೇವಲ ಕೆಸರಿನ ಗದ್ದೆಯಲ್ಲಿ ಓಡುತ್ತೇನೆ. ಆದರೆ ಉಸೇನ್ ಬೋಲ್ಟ್ ವಿಶ್ವ ಚಾಂಪಿಯನ್ ಎಂದು ಹೇಳಿದ್ದಾರೆ.

Leave a Reply