ಟ್ರಂಪ್ ಗೆ ರತ್ನಗಂಬಳಿ ಸ್ವಾಗತ! 3 ಗಂಟೆಗಳ ಅಹಮದಾಬಾದ್ ಭೇಟಿಗೆ 100 ಕೋಟಿ ವೆಚ್ಚ!

ಡಿಜಿಟಲ್ ಕನ್ನಡ ಟೀಮ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ 24 ಮತ್ತು 25ರಂದು ಭಾರತ ಪ್ರವಾಸ ಮಾಡಲಿದ್ದಾರೆ. ಈ ಪ್ರವಾಸದಲ್ಲಿ ಗುಜರಾತ್ ಗೂ ಟ್ರಂಪ್ ಭೇಟಿ ಮಾಡಲಿದ್ದು, 3 ಗಂಟೆಗಳ  ಅಹಮದಾಬಾದ್ ಭೇಟಿಗೆ ರಾಜ್ಯ ಸರ್ಕಾರ ಮಾಡುತ್ತಿರುವ ಒಟ್ಟು ಖರ್ಚು ಬರೋಬ್ಬರಿ 100 ಕೋಟಿಗೂ ಹೆಚ್ಚು!

ಟ್ರಂಪ್ ಗೆ ರತ್ನಗಂಬಳಿ ಸ್ವಾಗತ ನೀಡಲು ಗುಜರಾತ್ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಟ್ರಂಪ್ ಆತಿಥ್ಯಕ್ಕೆ ಯಾವುದೇ ಕುಂದು ಕೊರತೆ ಎದುರಾಗಬಾರದು. ಈ ವಿಚಾರದಲ್ಲಿ ಖರ್ಚಿನ ಚಿಂತೆ ಬೇಡ ಅಂತಾ ಸಿಎಂ ವಿಜಯ್ ರೂಪಾನಿ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇನ್ನು ಸದ್ಯ ಹಾಕಲಾಗಿರುವ ಅಂದಾಜಿನ ಪ್ರಕಾರ ಟ್ರಂಪ್ ಅಹಮದಾಬಾದ್ ಭೇಟಿಗಾಗಿ ಮಾಡುತ್ತಿರುವ ಖರ್ಚು ಹೀಗಿದೆ.

  • ಟ್ರಂಪ್ ಪ್ರಯಾಣ ಮಾಡುವ ಮಾರ್ಗದಲ್ಲಿ ರಸ್ತೆ ದುರಸ್ತಿ ಹಾಗೂ ನೂತನ ರಸ್ತೆ ನಿರ್ಮಾಣಕ್ಕೆ 80 ಕೋಟಿ.
  • ಅಮೆರಿಕ ಅಧ್ಯಕ್ಷರ ಭದ್ರತೆಗಾಗಿ 12-15 ಕೋಟಿ.
  • ಮೊಟರಾದಲ್ಲಿ ನಿರ್ಮಾಣ ಮಾಡಲಾಗಿರುವ ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನ ಉದ್ಘಾಟನೆಯಲ್ಲಿ ಭಾಗವಹಿಸುವ 1 ಲಕ್ಷಕ್ಕೂ ಹೆಚ್ಚು ಅತಿಥಿಗಳ ಸಂಚಾರ ಹಾಗೂ ಊಟದ ವ್ಯವಸ್ಥೆಗೆ 7-10 ಕೋಟಿ.
  • ಟ್ರಂಪ್ ಸಂಚರಿಸುವ ಮಾರ್ಗದಲ್ಲಿ ವಿನ್ಯಾಸ ಹಾಗೂ ಅಲಂಕಾರಕ್ಕಾಗಿ 6 ಕೋಟಿ.
  • ಮೋದಿ ಹಾಗೂ ಟ್ರಂಪ್ ಅವರ ಜಂಟಿ ರೋಡ್ ಶೋ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 4 ಕೋಟಿ ವೆಚ್ಚ ತಗುಲಲಿದೆ.

Leave a Reply