ಟ್ರಯಲ್ಸ್ ಬೇಡ ಕಂಬಳವೇ ಸಾಕು ಅಂತಾ ಶ್ರೀನಿವಾಸ ಗೌಡ ಹೇಳಿದ್ದು ಯಾಕೆ?!

ಡಿಜಿಟಲ್ ಕನ್ನಡ ಟೀಮ್:

ಕಂಬಳ ಓಟದಲ್ಲಿ ವಿಶ್ವ ಚಾಂಪಿಯನ್ ಉಸೇನ್ ಬೋಲ್ಟ್ ಅವರ ದಾಖಲೆ ಮುರಿದ ಖ್ಯಾತಿಯ ಶ್ರೀನಿವಾಸ ಗೌಡ ತಮಗೆ ಟ್ರ್ಯಾಕ್ ಓಟ ಬೇಡ ಕಂಬಳ ಓಟವೇ ಸಾಕು ಎಂದಿದ್ದು, ಈ ಮೂಲಕ ಕೇಂದ್ರ ಸರ್ಕಾರ ನೀಡಿದ್ದ ತರಬೇತಿ ಅವಕಾಶ ತಿರಸ್ಕರಿಸಿದ್ದಾರೆ.

ಈ ನಿರ್ಧಾರಕ್ಕೆ ಕಾರಣ ಏನು ಎಂದು ನೋಡಿದರೆ, ಮಾರ್ಚ್ 10ರ ವರೆಗೂ ಕಂಬಳ ಸ್ಪರ್ಧೆ ನಡೆಯಲಿದ್ದು, ಅಲ್ಲಿಯವರೆಗೂ ಇದೇ ಸ್ಪರ್ಧೆಯಲ್ಲಿ ಮುಂದುವರಿಯಲು ಶ್ರೀನಿವಾಸ ಗೌಡ ನಿರ್ಧರಿಸಿದ್ದಾನೆ. ಸಿಎಂ ಯಡಿಯೂರಪ್ಪ ಅವರು ಕೂಡ ಶ್ರೀನಿವಾಸ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಇದೇ ವೇಳೆ “ಕಂಬಳ ವೀರ ಶ್ರೀನಿವಾಸಗೌಡ ಅವರನ್ನು ಕರೆದಿದ್ದೇವೆ. ಅವರಿಗೆ ಅಗತ್ಯವಾದ ಎಲ್ಲಾ ತರಬೇತಿ ಕೊಡುತ್ತೇವೆ. ಅವರು ಫ್ರೀ ಕ್ವಾಲಿಫಿಕೇಶನ್​ನಲ್ಲಿ ಪಾಸ್ ಆದರೆ ಮುಂದಿನ ತರಬೇತಿ ನೀಡುತ್ತೇವೆ,” ಎಂದು ಸಚಿವ ಸಿಟಿ ರವಿ ತಿಳಿಸಿದ್ದಾರೆ.

ಕಂಬಳ ಸ್ಪರ್ಧೆ ಹಿನ್ನೆಲೆಯಲ್ಲಿ ಟ್ರಯಲ್ಸ್ ನಲ್ಲಿ ಭಾಗವಹಿಸಲು ನಿರಾಕರಿಸಿರುವ ಶ್ರೀನಿವಾಸ ಗೌಡ ಕಂಬಳ ಮುಗಿದ ಮೇಲೆ ಟ್ರಯಲ್ಸ್ ನಲ್ಲಿ ಭಾಗವಹಿಸುತ್ತಾರಾ? ಎಂಬ ಪ್ರಶ್ನೆ ಮೂಡಿದೆ.

Leave a Reply