ಅವನು ಇಬ್ಬರಲ್ಲ ಒಬ್ಬನೇ! ಮತ್ತೆ ಬರ್ತಿದ್ದಾನೆ ಕೋಟಿಗೊಬ್ಬ!

ಡಿಜಿಟಲ್ ಕನ್ನಡ ಟೀಮ್:

ಶಿವರಾತ್ರಿ ಪ್ರಯುಕ್ತ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಕೋಟಿಗೊಬ್ಬ 3 ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ.

ಸುದೀಪ್ ಅಭಿನಯದ ಕೋಟಿಗೊಬ್ಬ 2 ಚಿತ್ರದ ಮುಂದುವರಿದ ಭಾಗ ಇದಾಗಿದ್ದು, ಇದರಲ್ಲಿ ಸುದೀಪ್ ಅಂತಾರಾಷ್ಟ್ರೀಯ ಮಟ್ಟದ ಕಳ್ಳನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಹೆಚ್ಚು ಭಾಗ ವಿದೇಶದಲ್ಲಿ ಚಿತ್ರೀಕರಿಸಲಾಗಿದ್ದು, ರೋಚಕ ದೃಶ್ಯಗಳು ಅಭಿಮಾನಿಗಳನ್ನು ರಂಜಿಸುವ ಭರವಸೆ ಮೂಡಿಸಿದೆ.

ಈ ಚಿತ್ರದಲ್ಲೂ ಸುದೀಪ್ ಹಾಗೂ ರವಿಶಂಕರ್ ಅವರ ಕಾಂಬಿನೇಷನ್ ಮುಂದುವರಿದಿದೆ. ಸುದೀಪ್ ಅವರ ಸ್ಟೈಲಿಶ್ ಲುಕ್ ಅಭಿಮಾನಿಗಳಿಗೆ ಇಷ್ಟವಾಗಲಿದ್ದು, ಕುತೂಹಲ ಹುಟ್ಟಿಸಿದೆ.

Leave a Reply