ಉತ್ತರ ಪ್ರದೇಶದಲ್ಲಿ ಭಾರಿ ಪ್ರಮಾಣ ಚಿನ್ನದ ನಿಕ್ಷೇಪ ಪತ್ತೆ! ಇದರ ಮೌಲ್ಯ ಎಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಉತ್ತರ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಇದು ಭಾರತದಲ್ಲಿರುವ ಒಟ್ಟಾರೆ ಚಿನ್ನದ ನಿಕ್ಷೇಪಗಳಿಗಿಂತ 5 ಪಟ್ಟು ಹೆಚ್ಚಿನದ್ದಾಗಿದೆ. ಇದರ ಒಟ್ಟಾರೆ ಮೌಲ್ಯ 12 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ ಸದ್ಯ ಇರುವ ಎಲ್ಲ ಚಿನ್ನದ ನಿಕ್ಷೇಪಗಳಲ್ಲಿ 618 ಟನ್ ನಷ್ಟಿದ್ದರೆ, ಹೊಸದಾಗಿ ಸಿಕ್ಕಿರುವ ನಿಕ್ಷೇಪಗಳಲ್ಲಿ 3 ಸಾವಿರ ಟನ್ ಪ್ರಮಾಣದ್ದಾಗಿದೆ. ಈ ನಿಕ್ಷೇಪದಿಂದ ಭಾರತ ವಿಶ್ವದ ಎರಡನೇ ಅತಿ ದೊಡ್ಡ ಚಿನ್ನದ ನಿಕ್ಷೇಪ ಹೊಂದಿರುವ ರಾಷ್ಟ್ರವಾಗಲಿದೆ.

ಉತ್ತರ ಪ್ರದೇಶದ ಸೊನಾ ಪಹಡಿಯಲ್ಲಿ 2943 ಟನ್ ಹಾಗೂ ಹಾರ್ದಿಯಲ್ಲಿ 646 ಕೆಜಿ ಯಷ್ಟು ನಿಕ್ಷೇಪಗಳು ಪತ್ತೆಯಾಗಿವೆ.

ಸದ್ಯ ಅಮೆರಿಕದಲ್ಲಿ 8134 ಟನ್ ನಷ್ಟು ಚಿನ್ನದ ಅದಿರಿನ ನಿಕ್ಷೇಪ ಹೊಂದಿದ್ದು, ಅಗ್ರಸ್ಥಾನದಲ್ಲಿದೆ. 3367 ಟನ್ ಚಿನ್ನದ ನಿಕ್ಷೇಪ ಹೊಂದಿರುವ ಜರ್ಮನಿ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ಇಟಲಿ (2452), ಫ್ರಾನ್ಸ್ (2436), ರಷ್ಯಾ (2219), ಚೀನಾ (1937), ಸ್ವಿಜರ್ಲೆಂಡ್ (1040), ಜಪಾನ್ (765) ನಂತರದ ಸ್ಥಾನದಲ್ಲಿದ್ದು, ಭಾರತ 618 ಟನ್ ಗಳಷ್ಟು ನಿಕ್ಷೇಪದೊಂದಿಗೆ 9ನೇ ಸ್ಥಾನದಲ್ಲಿದೆ.

ನೂತನ ನಿಕ್ಷೇಪದೊಂದಿಗೆ ಭಾರತದ ಒಟ್ಟಾರೆ ಚಿನ್ನದ ನಿಕ್ಷೇಪದ ಪ್ರಮಾಣ 3618 ಟನ್ ಗಳಷ್ಟಾಗಳಿದ್ದು, ಅಮೆರಿಕದ ನಂತರದ ಸ್ಥಾನ ಪಡೆಯಲಿದೆ.

Leave a Reply