ವಿದೇಶಿ ನಾಯಕರ ಭಾರತ ಪ್ರವಾಸಕ್ಕೆ ಹೆಬ್ಬಾಗಿಲಾಯ್ತಾ ಅಹಮದಾಬಾದ್!?

ಡಿಜಿಟಲ್ ಕನ್ನಡ ಟೀಮ್:

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಭಾರತಕ್ಕೆ ಬರುವ ವಿದೇಶಿ ನಾಯಕರು, ಗಣ್ಯರ ಮೊದಲ ನಿಲ್ದಾಣ ಅಹಮದಾಬಾದ್ ಆಗಿದೆ.

ಕಾರಣ, ಇತ್ತೀಚಿನ ದಿನಗಳಲ್ಲಿ ಭಾರತ ಪ್ರವಾಸ ಮಾಡಿರುವ ವಿದೇಶಿ ನಾಯಕರ ಪೈಕಿ ಬಹುತೇಕ ಎಲ್ಲ ನಾಯಕರು ದೇಶದ ಬೇರೆ ರಾಜ್ಯಗಳಿಗೆ ಹೋಗ್ತಾರೋ ಇಲ್ವೋ ಗುಜರಾತ್ ಹಾಗೂ ಅಹಮದಾಬಾದ್ ಭೇಟಿ ಅಂತೂ ಮಾಡೇ ಮಾಡುತ್ತಾರೆ. ಇದೇ 24-25ರಂದು ಮೊದಲ ಬಾರಿಗೆ ಭಾರತ ಪ್ರವಾಸ ಮಾಡುತ್ತಿರುವ  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಅಹಮದಾಬಾದ್ ಗೆ ಮೊದಲು ಬಂದಿಳಿಯಲಿದ್ದಾರೆ. ಈ ಸಂದರ್ಭದಲ್ಲಿ ಯಾರೆಲ್ಲಾ ವಿದೇಶಿ ನಾಯಕರು ಭಾರತದ ವೇಳೆ ಅಹಮದಾಬಾದ್ ಗೆ ಭೇಟಿ ನೀಡಿದ್ದಾರೆ ನೋಡೋಣ ಬನ್ನಿ.

2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಭಾರತ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಕ್ಸಿ ಜಿನ್‌ಪಿಂಗ್‌ ಅವರನ್ನು ಗುಜರಾತ್‌ಗೆ ಕರೆದೊಯ್ದಿದ್ದರು. ಸೆಪ್ಟೆಂಬರ್‌ 17ರಂದು ನೇರವಾಗಿ ಅಹ್ಮದಾಬಾದ್‌ಗೆ ಬಂದಿಳಿದಿದ್ದ ಕ್ಸಿ ಜಿನ್‌ಪಿಂಗ್‌, ಆ ಬಳಿಕ ರಾಷ್ಟ್ರರಾಜಧಾನಿ ನವದೆಹಲಿಗೆ ತೆರಳಿದ್ದರು. ಆ ನಂತರ ಸೆಪ್ಟೆಂಬರ್‌ 19ರಂದು ಚೀನಾಕ್ಕೆ ವಾಪಸ್‌ ಆಗಿದ್ದರು. ಈ ನಡುವೆ ನರೇಂದ್ರ ಮೋದಿ ಹುಟ್ಟೂರಾದ ವಾದ್‌ನಗರಕ್ಕೂ ಕ್ಸಿ ಜಿನ್‌ಪಿಂಗ್‌ ಭೇಟಿ ನೀಡಿದ್ದರು. ಈ ವೇಳೆ ರೈಲ್ವೆ, ವಿದ್ಯುತ್‌, ಬಂದರು ಸೇರಿದಂತೆ ಹಲವಾರು ಒಪ್ಪಂದಗಳಿಗೆ ಸಹಿ ಮಾಡಿದ್ದರು. ಮಹಾತ್ಮ ಗಾಂಧಿ ವಾಸ ಮಾಡುತ್ತಿದ್ದ ಸಾಬರಮತಿ ನದಿ ತೀರದ ಆಶ್ರಮಕ್ಕೂ ಭೇಟಿ ನೀಡಿದ್ದರು.

ಚೀನಾ ಅಧ್ಯಕ್ಷರಾದ ಬಳಿ ಇಸ್ರೇಲ್‌ ಪ್ರಧಾನಿ ನೇತನ್ಯಾಹು ಕೂಡ ಭಾರತ ಪ್ರವಾಸ ಕೈಗೊಂಡಿದ್ದರು. 2018ರಲ್ಲಿ ಭಾರತಕ್ಕೆ ಬಂದಿದ್ದ ಇಸ್ರೇಲ್‌ ಪ್ರಧಾನಿ ನೇತನ್ಯಾಹು, ಅಹ್ಮದಾಬಾದ್‌ಗೆ ಬಂದಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಜೊತೆಗೂಡಿ ಬರೋಬ್ಬರಿ 8 ಕಿಲೋ ಮೀಟರ್‌ ದೂರವನ್ನು ರೋಡ್‌ ಶೋ ಮಾಡಿದ್ರು. 8 ಕಿಲೋ ಮೀಟರ್‌ ದೂರ ಕ್ರಮಿಸುವಾಗ 50 ಸ್ಟೇಜ್‌ಗಳಲ್ಲಿ ಭಾರತದ ಇತರೆ ರಾಜ್ಯಗಳ ಕಲಾವಿದರು ತಮ್‌ ರಾಜ್ಯದ ವಿಶೇಷತೆ ಬಗ್ಗೆ ನೃತ್ಯ ಮಾಡಿದ್ದರು. 130 ಜನ ಇಸ್ರೇಲ್‌ ಅಧಿಕಾರಿಗಳ ಜೊತೆ 6 ದಿನಗಳ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನೇತನ್ಯಾಹು, ವ್ಯಾಪಾರ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಸಹಿ ಹಾಕಿದ್ದರು.

2017ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಜಪಾನ್‌ ಪ್ರಧಾನಿ ಶಿಂಜೋ ಅಬೆ, ಗುಜರಾತ್‌ನ ಅಹ್ಮದಾಬಾದ್‌ ಏರ್‌ಪೋರ್ಟ್‌ಗೆ ಬಂದಿಳಿದಿದ್ದರು. ಎರಡು ದಿನಗಳ ಪ್ರವಾಸ ಕೈಗೊಂಡಿದ್ದ ಶಿಂಜೋ ಅಬೆ, ದೇಶದ ಮೊದಲ ಬುಲೆಟ್‌ ಟ್ರೈನ್‌ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಮುಂಬೈ ಹಾಗು ಅಹ್ಮದಾಬಾದ್‌ ನಡುವೆ ಬುಲೆಟ್‌ ರೈಲು ಓಡಿಸುವ ಮೋದಿ ಕನಸಿಗೆ ನಾಂದಿ ಹಾಡಲಾಗಿತ್ತು.

Leave a Reply