ಭಾರತದ ಜತೆ ಬೃಹತ್ ರಕ್ಷಣಾ ಒಪ್ಪಂದ! ಭಯೋತ್ಪಾದಕರಿಗೆ ಟ್ರಂಪ್ ವಾರ್ನಿಂಗ್!

ಡಿಜಿಟಲ್ ಕನ್ನಡ ಟೀಮ್:

ಅಮೆರಿಕದ ಅತ್ಯುತ್ತಮ ಸ್ನೇಹ ರಾಷ್ಟ್ರ ಭಾರತ. ಮಿಲಿಟರಿ, ವಿಜ್ಞಾನ, ಆರ್ಥಿಕತೆ, ಸಂಶೋಧನೆ, ಇಂಡೋ ಫೆಸಿಫಿಕ್ ಪ್ರದೇಶ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಭಾರತ ಹಾಗೂ ಅಮೆರಿಕ ಅತ್ಯುತ್ತಮ ಬಾಂಧವ್ಯ ಹೊಂದಿರುವ ರಾಷ್ಟ್ರ ಎಂದು ಘೋಷಣೆ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾಳೆ ದೆಹಲಿಯಲ್ಲಿ ಭಾರತದ ಜತೆ ಅತಿದೊಡ್ಡ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಘೋಷಣೆ ಮಾಡಿದ್ದಾರೆ.

ಮೊಟರಾ ಕ್ರೀಡಾಂಗಣದಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಟ್ರಂಪ್, ಭಾರತರದ ಜತೆ ರಕ್ಷಣಾ ಬಾಂಧವ್ಯ ವೃದ್ಧಿಸುವ ಭರವಸೆ ನೀಡುವುದರ ಜತೆಗೆ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ಹೆಗಲಿಗೆ ಹೆಗಲು ನೀಡುವುದಾಗಿ ಮಾತು ಕೊಟ್ಟಿದ್ದಾರೆ. ಜತೆಗೆ ಪಾಕಿಸ್ತಾನ ಕೂಡ ನಮ್ಮ ಉತ್ತಮ ಸ್ನೇಹಿ ರಾಷ್ಟ್ರ ಎಂದು ಹೇಳಿದರೂ ಉಗ್ರರಿಗೆ ನೆರವು ನೀಡುವ ರಾಷ್ಟ್ರಗಳು ಬೆಲೆ ತೆರಬೇಕಾಗುತ್ತದೆ ಎಂದು ಪರೋಕ್ಷ ಎಚ್ಚರಿಕೆ ರವಾನಿಸಿದ್ದರು. ಈ ವೇಳೆ ಅವರು ಹೇಳಿದ್ದಿಷ್ಟು…

‘ಭಾರತದ ಜತೆಗೆ ರಕ್ಷಣಾ ಬಾಂಧವ್ಯಕ್ಕೆ ಅಮೆರಿಕ ಬದ್ಧವಾಗಿದ್ದು, ನಾಳೆ ದೆಹಲಿಯಲ್ಲಿ ಭಾರತದ ಜೊತೆ ಅತಿದೊಡ್ಡ ಒಪ್ಪಂದ (30 ಸಾವಿರ ಕೋಟಿ ಮೌಲ್ಯದ) ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಲಾಗುವುದು. ಭಾರತ ಹಾಗೂ ಅಮೆರಿಕ ರಾಷ್ಟ್ರಗಳು ಭಯೋತ್ಪಾದನೆ ದಾಳಿಗೆ ಒಳಗಾಗಿರುವ ದೇಶವಾಗಿದ್ದು, ಈ ಎರಡೂ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ ನಡೆಸಲಿವೆ. ಭಯೋತ್ಪಾದನೆ ವಿರುದ್ಧ ಭಾರತಕ್ಕೆ ಸಹಕಾರ ಕೊಡಲಾವುದು. ಪಾಕಿಸ್ತಾನ ಗಡಿಯಲ್ಲಿ ಉಗ್ರ ಚಟುವಟಿಕೆಗಳು ನಡೆಯುತ್ತಿವೆ. ಉಗ್ರರಿಗೆ ನೆಲೆ ನೀಡುವ ರಾಷ್ಟ್ರಗಳು ತಕ್ಕ ಬೆಲೆ ತೆರಬೇಕಾಗುತ್ತದೆ.’

Leave a Reply