ಟ್ರಂಪ್ ಬಾಯಲ್ಲಿ ಮೋದಿ ಗುಣಗಾನ!

ಡಿಜಿಟಲ್ ಕನ್ನಡ ಟೀಮ್:

ಅಮೆರಿಕ, ಭಾರತವನ್ನು ಪ್ರೀತಿಸುತ್ತದೆ ಮತ್ತು ಗೌರವಿಸುತ್ತದೆ ಎನ್ನುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಗಳ ಪಟ್ಟಿಯನ್ನು ಉಲ್ಲೇಖಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಣಗಾನ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಭಾರತ ಪ್ರವಾಸ ಮಾಡಿರುವ ಡೊನಾಲ್ಡ್ ಟ್ರಂಪ್, ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನವಾಗಿರುವ ಮೊಟರಾ ಕ್ರೀಡಾಂಗಣದಲ್ಲಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವೇಳೆ ಮೋದಿಯ ಗುಣಗಾನ ಮಾಡಿದ್ದು ಹೀಗೆ…

‘ಪ್ರಧಾನಿ ನರೇಂದ್ರ ಮೋದಿ ನನ್ನ ನಿಜವಾದ ಸ್ನೇಹಿತ. ಮೋದಿ ಭಾರತದ ಚಾಂಪಿಯನ್ ಹಾಗೂ
ವಿಶ್ವದ ಪ್ರಭಾವಿ ನಾಯಕರಲ್ಲೊಬ್ಬರು. ಚಾಯ್​ವಾಲಾ ಪ್ರಧಾನಿಯಾಗಿದ್ದು ಇತಿಹಾಸ. ಮೋದಿ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದ ಯಶಸ್ವಿ ನಾಯಕರಾಗಿದ್ದಾರೆ. ಮೋದಿ ಗುಜರಾತ್​ ಮಗನಷ್ಟೇ ಅಲ್ಲ ಮೋದಿ ಇಡೀ ದೇಶದ ಪುತ್ರ. ಭಾರತ ಮಾನವೀಯತೆಯ ಭರವಸೆ ದೇಶವಾಗಿದೆ. ಭಾರತದ ಆರ್ಥಿಕತೆ ಮೋದಿ ನೇತೃತ್ವದಲ್ಲಿ ವೇಗದ ಬೆಳವಣಿಗೆ ಕಾಣುತ್ತಿದೆ. ಬಡತನ ನಿವಾರಣೆಗೆ ಮೋದಿ ಪಣ ತೊಟ್ಟಿದ್ದಾರೆ. ದೇಶದ ಎಲ್ಲೆಡೆ ವಿದ್ಯುತ್​ ಸಂಪರ್ಕ ಹಾಗೂ ಅಡುಗೆ ಅನಿಲ ಸಂಪರ್ಕ ನೀಡಿ ಕ್ರಾಂತಿ ಮಾಡಿದ್ದಾರೆ. ಅತಿದೊಡ್ಡ ಮಧ್ಯಮವರ್ಗ ಹೊಂದಿರುವ ರಾಷ್ಟ್ರ ಭಾರತ ಅತಿಬೇಗ ಬಡತನ ಮುಕ್ತವಾಗಲಿದೆ.’

ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರು, ಮಹಾತ್ಮ ಗಾಂಧಿ ಹಾಗೂ ಸರ್ದಾರ ಪಟೇಲರನ್ನು ನೆನೆದ ಟ್ರಂಪ್, ಬಾಲಿವುಡ್, ಕ್ರಿಕೆಟ್ ದಿಗ್ಗಜ ಸಚಿನ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ, ಭಾಷೆ ವೈವಿಧ್ಯತೆ, ದೀಪಾವಳಿ ಹಬ್ಬ ಆಚರಣೆ ಸೇರಿದಂತೆ ಭಾರತದ ವಿಶೇಷತೆಗಳನ್ನು ಹೊಗಳಿದರು.

Leave a Reply