ದೆಹಲಿ ಸ್ಮಶಾನವಾಯ್ತು, ಟ್ರಂಪ್ ಮಾತು ಸುಳ್ಳಾಯ್ತು, ಭಾರತದ ಮಾನ ಹರಾಜಾಯ್ತು!

ಡಿಜಿಟಲ್ ಕನ್ನಡ ಟೀಮ್:

‘ಭಾರತ ಮಾನವೀಯತೆಯ ಆಶಾ ಕಿರಣ, ಭಾರತದಲ್ಲಿ ವಿವಿಧ ಧರ್ಮಗಳ ಜನರು ಒಗ್ಗಟ್ಟಿನಿಂದ ಬದುಕುತ್ತಿದ್ದಾರೆ, ಮೋದಿ ಭಾರತದಲ್ಲಿ ಎಲ್ಲ ಧರ್ಮದವರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತಿದ್ದಾರೆ…’ ಇವು ನಿನ್ನೆ ಅಮೆರಿಕ ಡೊನಾಲ್ಡ್ ಟ್ರಂಪ್ ಭಾರತದ ಧಾರ್ಮಿಕ ವೈವಿಧ್ಯತೆಗಳ ಬಗ್ಗೆ ಆಡಿದ ಮಾತುಗಳು.

ಟ್ರಂಪ್ ಹೀಗೆ ಭಾರತವನ್ನು ಹೋಗಳುತ್ತಿದ್ದರೆ ಅತ್ತ ದೆಹಲಿಯಲ್ಲಿ ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ದಾಳಿ ನಡೆದಿದೆ. ಈಶಾನ್ಯ ದೆಹಲಿಯ ಜಫ್ರಾಬಾದ್, ಚಾಂದ್ ಭಾಗ್, ಕರಾವಲ್ ನಗರದಲ್ಲಿ ಪೊಲೀಸರನ್ನು ಲೆಕ್ಕಿಸದೆ ಕಲ್ಲು ತೂರಾಟ ಹಾಗೂ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ ಪೊಲೀಸ್ ಪೇದೆ ಸೇರಿ ನಾಲ್ವರು ಮಂದಿ ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿ ಕಿಡಿಗೇಡಿಗಳು ಕೆಲವು ಮನೆಗಳಿಗೆ ನುಗ್ಗಿ ದಾಂದಲೇ ನಡೆಸಿದರೆ, ಮತ್ತೇ ಕೆಲವು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಭಯ ಹುಟ್ಟಿಸುವಂತಿದೆ. ವ್ಯಕ್ತಿಯನ್ನು ಕಿಡಿಗೇಡಿಗಳ ಗುಂಪು ದೊಣ್ಣೆಯಿಂದ ಥಳಿಸುತ್ತಿದ್ದರೆ, ಮತ್ತೆ ಕೆಲವರು ಪೊಲೀಸರ ಪಕ್ಕದಲ್ಲಿ ನಿಂತು ಕಲ್ಲು ತೂರಾಟ ಮಾಡುತ್ತಿದ್ದಾರೆ. ಮನೆ, ವಾಹನಗಳು ಧಗ ಧಗನೆ ಉರಿಯುತ್ತಿದೆ.

ಅತ್ತ ಮೋದಿ ಭಾರತವನ್ನು ಕೊಂಡಾಡುತ್ತಿದ್ದರೆ ಇತ್ತ ದೇಹಲಿಯಲ್ಲಿನ ಈ ಘಟನೆ ಭಾರತದ ಮಾನ ಹರಾಜು ಹಾಕುತ್ತಿತ್ತು. ಆದಷ್ಟು ಬೇಗ ಗೃಹ ಇಲಾಖೆ ಸಮಾಜದಲ್ಲಿ ಶಾಂತಿ ಕದಡುತ್ತಿರುವ ಕಿಡಿಗೇಡಿಗಳ ಮಟ್ಟ ಹಾಕಬೇಕಿದೆ.

Leave a Reply