ಜನರಿಗಾಗಿ ಮೋದಿ ಒಳ್ಳೆಯ ನಿರ್ಧಾರವನ್ನೇ ತಗೋತಾರೆ: ಟ್ರಂಪ್

ಡಿಜಿಟಲ್ ಕನ್ನಡ ಟೀಮ್:

‘ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರ ಭಾರತದ ಆಂತರಿಕ ವಿಚಾರ. ಪ್ರಧಾನಿ ನರೇಂದ್ರ ಮೋದಿ ತನ್ನ ದೇಶದ ಜನರ ಒಳಿತಿಗಾಗಿ ಉತ್ತಮ ನಿರ್ಧಾರಗಳನ್ನೇ ತೆಗೆದುಕೊಳ್ತಾರೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ದೆಹಲಿ ಪ್ರತಿಭಟನೆ ಹಿಂಸಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಟ್ರಂಪ್, ಮೋದಿ ಜತೆ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಚರ್ಚೆ ನಡೆಸ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನಿಸಿದ ಟ್ರಂಪ್, ‘ನಾವು ಧಾರ್ಮಿಕ ಸ್ವಾತಂತ್ರ್ಯದ ವಿಚಾರವಾಗಿ ಚರ್ಚೆ ಮಾಡಲಿಲ್ಲ. ಅವರು ನನಗೆ ಹೇಳಿದ ಪ್ರಕಾರ ಅವರು ದೇಶದ ಜನತೆಯ ಒಳಿತಿಗೆ ಉತ್ತಮ ನಿರ್ಧಾರವನ್ನೇ ಕೈಗೊಳ್ಳಲಿದ್ದಾರೆ. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಶ್ರಮಿಸುತ್ತಿರುವುದಾಗಿ ತಿಳಿಸಿದ್ದಾರೆ’ ಎಂದರು.

ಇನ್ನು ಸಿಎಎ ವಿಚಾರವಾಗಿ ಮಾತನಾಡಿ, ‘ಮೋದಿ ಅವರ ಬಳಿ ಸಿಎಎ ವಿಚಾರವಾಗಿ ಮಾತನಾಡಲಿಲ್ಲ. ಇದು ಭಾರತಕ್ಕೆ ಬಿಟ್ಟ ವಿಚಾರ. ಹೀಗಾಗಿ ನಾನು ಈ ಬಗ್ಗೆ ಮಾತನಾಡುವುದಿಲ್ಲ. ಭಾರತ ತನ್ನ ಜನರಿಗಾಗಿ ಸರಿಯಾದ ನಿರ್ಧಾರ ಕಾಗೊಳ್ಳಲಿದೆ ಎಂದು ಭಾವಿಸುತ್ತೇನೆ’ ಎಂದರು.

ಕಾಶ್ಮೀರ ವಿಚಾರವಾಗಿ ಮಾತನಾಡಿ, ನಾನು ಹಾಗೂ ಮೋದಿ ವರು ಕಾಶ್ಮೀರ ವಿಚಾರವಾಗಿ ಸುದೀರ್ಘ ಚರ್ಚೆ ಮಾಡಿದೆವು. ಉಭಯ ದೇಶಗಳ ನಡುವೆ ಕಾಶ್ಮೀರ ದೊಡ್ಡ ಸಮಸ್ಯೆಯಾಗಿದೆ. ಈ ವಿಚಾರದಲ್ಲಿ ಹೆಚ್ಚೆಂದರೆ ನಾನು ಮಧ್ಯಸ್ಥಿಕೆ ವಹಿಸಬಹುದಷ್ಟೇ. ಕಾಶ್ಮೀರ ವಿಚಾರವಾಗಿ ಭಾರತ ಮತ್ತು ಪಾಕಿಸ್ತಾನ ಕಾರ್ಯನಿರ್ವಹಿಸುತ್ತಿವೆ. ಇನ್ನು ಭಯೋತ್ಪಾದನೆ ವಿಚಾರವಾಗಿ ಮಾತನಾಡಿದ್ದು, ಭಯೋತ್ಪಾದನೆ ವಿರುದ್ಧ ಹೋರಾಡಲು ಉಭಯ ನಾಯಕರಿಗೆ ನನ್ನಿಂದಾಗುವ ಎಲ್ಲ ಸಹಕಾರ ನೀಡುತ್ತೇನೆ. ಪಾಕಿಸ್ತಾನ ಕೂಡ ಗಡಿಯಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಪ್ರಯತ್ನಿಸುತ್ತಿದೆ ಎಂದು ಜಾರಿಕೊಂಡರು.

Leave a Reply