ಕಿರಿಕ್ ಪಾರ್ಟಿ 2 ಬರುತ್ತಾ? ಈ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದ್ದ ಕಿರಿಕ್ ಪಾರ್ಟಿ ಚಿತ್ರದ ಎರಡನೇ ಭಾಗವನ್ನು ಮಾಡುವ ಬಗ್ಗೆ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ.

ನಿನ್ನೆಯಷ್ಟೇ ಕಿರಿಕ್ ಪಾರ್ಟಿ ಚಿತ್ರದ ಹಾಡಿನ ಟ್ಯೂನ್ ವಿಚಾರವಾಗಿ ನ್ಯಾಯಾಲಯ ರಕ್ಷಿತ್ ಶೆಟ್ಟಿ ಅವರಿಗೆ ಜಾಮೀನು ರಹಿತ ವಾರೆಂಟ್ ನೀಡಿದೆ. ಇದರ ಬೆನ್ನಲ್ಲೇ ರಕ್ಷಿತ್ ಶೆಟ್ಟಿ ಇಂದು ತಮ್ಮ ಟ್ವಿಟ್ಟರ್ ನಲ್ಲಿ ಕಿರಿಕ್ ಪಾರ್ಟಿ 2 ಚಿತ್ರ ಮಾಡುವ ಬಗ್ಗೆ ತಿಳಿಸಿದ್ದಾರೆ. ಅವರು ತಮ್ಮ ಟ್ವಿಟ್ಟರ್ ನಲ್ಲಿ ಹೇಳಿರೋದಿಷ್ಟು…

‘ಈವರೆಗೂ ಕಿರಿಕ್ ಪಾರ್ಟಿ ಚಿತ್ರ ಮಾಡುವ ಆಲೋಚನೆ ಇರಲಿಲ್ಲ. ಆದರೆ ಈಗ ಒಳ್ಳೆಯ ಎಳೆ ಸಿಕ್ಕಿದೆ. ಕಿರಿಕ್ ಪಾರ್ಟಿ ಮತ್ತೆ ತೆರೆ ಮೇಲೆ ಬರಲಿದ್ದು, ಎಲ್ಲರನ್ನೂ ರಂಜಿಸಲಿದೆ.’

 

Leave a Reply