ಮಹದಾಯಿ ಸಂಭ್ರಮದಲ್ಲಿ ಯಾರೆಲ್ಲಾ ಏನಂದ್ರು..?

ಡಿಜಿಟಲ್ ಕನ್ನಡ ಟೀಮ್:

ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಬೆಂಗಳೂರಲ್ಲಿ ಸಿಎಂ ಯಡಿಯೂರಪ್ಪ ಸಂತದ ವ್ಯಕ್ತಪಡಿಸಿದ್ದಾರೆ. ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಬಹಳ ವರ್ಷಗಳ ಬೇಡಿಕೆ ಈಡೇರಿದೆ ಎಂದಿದ್ದಾರೆ. ಈ ಅಧಿಸೂಚನೆ ನೀರಾವರಿಗೆ ಅನುಕೂಲವಾಗಿದ್ದು, ಹುಬ್ಬಳ್ಳಿ ಭಾಗದ ಜನರಿಗೆ ಕುಡಿಯುವ ನೀರು ಸಿಗುತ್ತದೆ. 13.5 ಟಿಎಂಸಿ ನೀರು ಸಿಗುತ್ತದೆ. ಮಹದಾಯಿಗೆ ಬಜೆಟ್ನಲ್ಲಿ ಹೆಚ್ಚು ಅನುದಾನ ಕೊಡಲಿದ್ದು, ಆದಷ್ಟು ಬೇಗ ಕೆಲಸ ಪ್ರಾರಂಭಿಸುತ್ತೇವೆ ಎಂದಿದ್ದಾರೆ.

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೆವು. ನಮ್ಮ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಪ್ರಧಾನಿ ಮೋದಿಯವರಿಗೆ ಅಭಿನಂದಿಸುತ್ತೇವೆ. ಟ್ರಿಬ್ಯುನಲ್ ಆದೇಶದಂತೆ ಶೀಘ್ರವಾಗಿ ಕಾಮಗಾರಿ ಮುಂದುವರಿಸುತ್ತೇವೆ. ಮಹದಾಯಿಗೆ 200 ಕೋಟಿ ಮೀಸಲಿಡಲು ಮನವಿ ಮಾಡಿದ್ದೇನೆ . ಕುಡಿಯುವ ನೀರಿಗೆ NGT ಅನುಮತಿ ಬೇಕಾಗಿಲ್ಲ. ಈ ಸಂದರ್ಭದಲ್ಲಿ ವಿಜಯೋತ್ಸವ ಬೇಡ ಎಂದಿದ್ದಾರೆ ರಮೇಶ್ ಜಾರಕಿಹೊಳಿ.

ಮಹದಾಯಿ ಅಧಿಸೂಚನೆ ಹೊರಡಿಸಿದ್ದು ಬಂಡಾಯದ ನಾಡು ನರಗುಂದದಲ್ಲಿ ಹೋರಾಟಗಾರರು ವಿಜಯೋತ್ಸವ ಆಚರಿಸಿದ್ದಾರೆ. ಗದಗ ಜಿಲ್ಲೆ ನರಗುಂದದಲ್ಲಿ ಮಹದಾಯಿ ಹೋರಾಟ ವೇದಿಕೆ ಬಳಿ ಹುತಾತ್ಮ ರೈತ ಈರಪ್ಪ ಕಡ್ಲಿಕೊಪ್ಪ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ. ಕಳಸಾ ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ ಹಾಗೂ ಶಂಕರ ಅಂಬಲಿ ನೇತೃತ್ವದಲ್ಲಿ ವಿಜಯೋತ್ಸವ ಮಾಡಿದ್ದು, ರೈತರು ಹಾಗೂ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು. ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದು, ಉತ್ತರ ಕರ್ನಾಟಕದ ಬಹುದಿನಗಳ ಹೋರಾಟಕ್ಕೆ ಸಂದ ಜಯ ಎಂದಿದ್ದಾರೆ. ಗದಗದಲ್ಲಿ ಸಚಿವ ಸಿ ಸಿ ಪಾಟೀಲ್ ಮಾತನಾಡಿ, ಮಹಾದಾಯಿ ನದಿ ನೀರು ಹಂಚಿಕೆ ವಿವಾದ, ಗೆಜೆಟ್ ನೋಟಿಫಿಕೇಶನ್ ಹೊರಡಿಸುವ ಮೂಲಕ ಹೋರಾಟಕ್ಕೆ ನ್ಯಾಯ ಒದಗಿಸಿದೆ. ಹೋರಾಟ ಮಾಡಿದ ಎಲ್ಲಾ ರೈತರು ಹಾಗೂ ನಾಯಕರಿಗೆ ಅಭಿನಂದನೆ ಜೊತೆಗೆ ಮಹದಾಯಿ ಯೋಜನೆ ಅನುಧಾನ ಮಿಸಲು ಇಡುವಂತೆ ಒತ್ತಾಯ ಮಾಡುತ್ತೇವೆ ಎಂದಿದ್ದಾರೆ.

ಮಹದಾಯಿ ಸಂಬಂಧ ಕೇಂದ್ರ ಅಧಿಸೂಚನೆ ಹೊರಡಿಸಿದ್ದಕ್ಕೆ ಹುಬ್ಬಳ್ಳಿಯಲ್ಲಿ ಮಹದಾಯಿ ಹೋರಾಟಗಾರ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸಿಹಿ ಹಂಚಿಕೆ ಮಾಡಿ ಸಂಭ್ರಮಿಸಿದ್ದಾರೆ. ಬಣ್ಣ ಎರಚಿ ಕುಣಿದು ಕುಪ್ಪಳಿಸಿದ್ದಾರೆ. ಈ ವೇಳೆ ಚೆನ್ನಮ್ಮನ ಪುತ್ಥಳಿಗೆ ಹೋರಾಟಗಾರರು ಮಾಲಾರ್ಪಣೆ ಮಾಡಿದ್ದಾರೆ. ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ, ರಾಜಣ್ಣ ಕೊರವಿ, ಸಿದ್ದು ತೇಜಿ, ಅಮೃತ್ ಇಜಾರೆ, ಶಿವಣ್ಣ ಹುಬ್ಬಳ್ಳಿ, ಸಂಜೀವ್ ಧುಮಕನಾಳ ಭಾಗಿಯಾಗಿದ್ದರು. ರೈತರ ದಶಕಗಳ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ಹೇಳಿದ್ದಾರೆ. ಇನ್ನು ಸಚಿವ ಜಗದೀಶ್​ ಶೆಟ್ಟರ್​ ಮಾತನಾಡಿ, 4 ದಶಕಗಳ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ರಾಜ್ಯದ ರೈತರಿಗೆ ಸಿಕ್ಕ ಗೆಲುವು. ಕೇಂದ್ರ ನೀರಾವರಿ ಸಚಿವರಿಗೆ ಅಭಿನಂದನೆಗಳು ಎಂದಿದ್ದಾರೆ. ಶೀಘ್ರದಲ್ಲೇ ಕಳಸಾ- ಬಂಡೂರಿ ಕಾಮಗಾರಿ ಶುರು ಮಾಡಲಿದ್ದು, ಸರ್ಕಾರ ಬಜೆಟ್ನಲ್ಲಿ ಅನುದಾನ ಮೀಸಲಿಡಲಿದೆ ಎಂದಿದ್ದಾರೆ.

ಮಹದಾಯಿ ಅಧಿಸೂಚನೆ ಬಗ್ಗೆ ಕಲಬುರ್ಗಿಯಲ್ಲಿ DCM ಗೋವಿಂದ ಕಾರಜೋಳ ಮಾತನಾಡಿದ್ದು, 300 ವರ್ಷಗಳಿಂದ ನೀರಿಗಾಗಿ ಹೋರಾಟ ನಡೆಯುತ್ತಿವೆ. ಆ ಹೋರಾಟಕ್ಕೆ ಶಾಶ್ವತ ಪರಿಹಾರ ಸಿಕ್ಕಿದೆ. ನೀರಿನ ವಿವಾದಗಳು ಮುಗಿಯೋದಿಲ್ಲ. ಸಿಕ್ಕಿರುವ ಹನಿ ನೀರು ವ್ಯರ್ಥವಾಗದಂತೆ ನೋಡಿಕೊಳ್ತೇವೆ. ವಿಧಾನಸೌಧದಲ್ಲಿ ಕೂತವರು ಮಾರವಾಡಿಗಳ ಮಕ್ಕಳಲ್ಲ. ವಿಧಾನಸೌಧದಲ್ಲಿ ರೈತರ ಮಕ್ಕಳೂ ಇದ್ದೇವೆ. ರೈತರಿಗೆ ಅನಕೂಲವಾಗುವ ರೀತಿ ಕೆಲಸ ಮಾಡ್ತಿದ್ದೇವೆ ಎಂದಿದ್ದಾರೆ.

ಕೇಂದ್ರ ಸರ್ಕಾರ ಮಹದಾಯಿ ಆದೇಶದ ಬಗ್ಗೆ ಅಧಿಸೂಚನೆ ಹೊರಡಿಸಿದ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅಧಿಸೂಚನೆ ಹೊರಡಿಸಿರೋದು ಸಂತೋಷದ ವಿಚಾರ. ಇದು ಪ್ರಾದೇಶಿಕತೆಯ ವಿಚಾರವಾಗಿದ್ದು, ಅಧಿಸೂಚನೆಯಿಂದ 13 ಟಿಎಂಸಿ ನೀರು ನಮಗೆ ಸಿಗುತ್ತೆ. ಅಧಿಸೂಚನೆಯಿಂದ ನಮ್ಮ ಅಂತಿಮ ಗುರಿ ಮುಟ್ಟಿದೆ ಅನ್ನಿಸುತ್ತೆ. ಸುಪ್ರೀಂಕೋರ್ಟ್ ಆದೇಶದ ಮೇಲೆ ಅಧಿಸೂಚನೆ ಹೊರಡಿಸಿದ್ದಾರೆ. ವಿಳಂಬ ಮಾಡದೇ ಅಧಿಸೂಚನೆ ಹೊರಡಿಸಿರೋದು ಸಂತೋಷದ ವಿಚಾರ. ಕಾವೇರಿ ಅಧಿಸೂಚನೆ ಹೊರಡಿಸೋದು ಸಾಕಷ್ಟು ವಿಳಂಬ ಆಗಿತ್ತು ಎಂದು ನೆನಪು ಮಾಡಿಕೊಂಡಿರುವ ಗೌಡ್ರು, ಮಹದಾಯಿ ಬಗ್ಗೆ ಬೇಗ ಅಧಿಸೂಚನೆ ಹೊರಡಿಸಿದ್ದಾರೆ. ಆ ಭಾಗದ ಜನ ದೊಡ್ಡ ಹೋರಾಟ ಮಾಡಿದ್ದಾರೆ. ಮಹಿಳೆಯರು, ರೈತರು ಸೇರಿದಂತೆ ಎಲ್ಲರು ಹೋರಾಟ ಮಾಡಿದ್ದಾರೆ. ಅವ್ರೆಲ್ಲರ ಹೋರಾಟ ಅಂತಿಮ ಗುರಿ ಕಂಡಿದೆ. ಇದು ಸಂತೋಷದ ವಿಚಾರ ಎಂದಿದ್ದಾರೆ.

Leave a Reply