ಚೀನಾ ವಸ್ತುಗಳ ಮೇಲೆ ಅತಿಯಾದ ಅವಲಂಬನೆ; ಈಗ ಪರ್ಯಾಯ ಹುಡುಕಾಟದಲ್ಲಿ ಭಾರತ!

ಡಿಜಿಟಲ್ ಕನ್ನಡ ಟೀಮ್:

ಚೀನಾ ಮೇಲೆ ಅತಿಯಾದ ಅವಲಂಬನೆ ಪರಿಣಾಮ ಇಂದು ಕೊರೋನಾ ವೈರಸ್ ಪರಿಣಾಮ ಪರೋಕ್ಷವಾಗಿ ಭಾರತದ ಮೇಲೆ ಪ್ರಭಾವ ಬೀರುತ್ತಿದೆ. ಸಾವಿರಕ್ಕೂ ಹೆಚ್ಚು ಅಗತ್ಯ ಸರಕುಗಳ ಪೂರೈಕೆ ಸಾಧ್ಯವಾಗದೇ ಭಾರತದ ಕೈಗಾರಿಕಾ ಕ್ಷೇತ್ರ ಸಂಕಷ್ಟಕ್ಕೆ ಒಳಗಾಗಿದೆ.

ಭಾರತ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳ ಪೈಕಿ ಶೇ.50ರಷ್ಟು ಸರಕು ಚೀನಾದಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದೆ. ಪರಿಣಾಮ ಅನೇಕ ಕಂಪನಿಗಳು, ಉದ್ಯಮಗಳು ಚೀನಾ ಉತ್ಪನ್ನಗಳ ಮೇಲೆ ನಿಂತಿರುವುದರ ಪರಿಣಾಮ ಇಂದು ಈ ಎಲ್ಲ ಕೈಗಾರಿಕೆಗಳು ಉತ್ಪಾದನೆ ಮಾಡಲು ಸಾಧ್ಯವಾಗದ ಪರಿಸ್ಥಿತಿಗೆ ಬಂದಿದೆ. ಇದು ಭಾರತ ಯಾವ ಮಟ್ಟಿಗೆ ಚೀನಾ ಮೇಲೆ ಅವಲಂಬಿತವಾಗಿದೆ ಎಂಬುದನ್ನು ತೋರುತ್ತಿದೆ.

ಜವಳಿಯಿಂದ ರೇಫ್ರೀಜರೇಟರ್ ವರೆಗೂ, ಸ್ಯುಟ್ಕೇಸ್ ನಿಂದ ಜೀವನಿರೋಧಕದ ವರೆಗೂ, ಯಾಂತ್ರಿಕ ಸಲಕರಣೆಗಳಿಂದ ಆಟೋ ಮೊಬೈಲ್ ಬಿಡಿ ಭಾಗಗಳು, ಅನೇಕ ಕಬ್ಬಿಣ ಮತ್ತು ಅಲ್ಯೂಮಿನಿಯಂ ವಸ್ತುಗಳಿಂದ ಮೊಬೈಲ್ ಫೋನ್ ವರೆಗೂ ಸೇರಿ 1050ಕ್ಕೂ ಹೆಚ್ಚು ಉತ್ಪನ್ನಗಳ ಪೂರೈಕೆಗೆ ಚೀನಾ ಬದಲಿಗೆ ಪರ್ಯಾಯ ಪೂರೈಕೆ ಮಾರ್ಗ ಕಂಡುಕೊಳ್ಳಲು ಭಾರತ ನಿರ್ಧರಿಸಿದೆ.

ಕೇಂದ್ರ ವಾಣಿಜ್ಯ ಇಲಾಖೆ ಈಗ ಭಾರತದ ಮಾರುಕಟ್ಟೆಯಲ್ಲಿ ಪೂರೈಕೆ ಕೊರತೆ ಇರುವ ಉತ್ಪನ್ನಗಳನ್ನು ಪೂರೈಸಬಲ್ಲ ಇತರೆ ಮಾರ್ಗಗಳ ಕುರಿತು ಪಟ್ಟಿ ಮಾಡಿದೆ.

ಎಲೆಕ್ಟ್ರಾನಿಕ್ ವಸ್ತು ಹಾಗೂ ಬಿಡಿ ಭಾಗಗಳ ಪೂರೈಕೆಗೆ ಭಾರತ ತನ್ನಲ್ಲೇ ಸಾಧ್ಯವಾದಷ್ಟು ಉತ್ಪಾದನೆ ಮಾಡುವುದು ಉಳಿದ ಪೂರೈಕೆಯನ್ನು ಬ್ರೆಜಿಲ್ ಹಾಗೂ ವಿಯೆಟ್ನಾಂ ಕಡೆ ಮುಖ ಮಾಡಿದೆ. ಇನ್ನು ಪ್ಲಾಸ್ಟಿಕ್ ವಸ್ತುಗಳ ಪೂರೈಕೆಗೆ ಮೆಕ್ಸಿಕೋ ಮತ್ತು ಬ್ರೆಜಿಲ್, ಪೀಠೋಪಕರಣ ಮತ್ತು ಬಿಡಿ ಭಾಗಗಳಿಗಾಗಿ ಮೆಕ್ಸಿಕೋ, ಆಟೋ ಮೊಬೈಲ್ ಮತ್ತು ವಾಹನ ಬಿಡಿ ಭಾಗಗಳಿಗೆ ಭಾರತದಲ್ಲೇ ಉತ್ಪಾದನೆ ಸೇರಿ ಚಿಲೆ ಮತ್ತು ಕೊಲಂಬಿಯಾದಿಂದ ಪೂರೈಕೆ ಮಾಡಿಕೊಳ್ಳಲು ನಿರ್ಧರಿಸಿದೆ.

ಉಡುಪು ಉತ್ಪನ್ನಗಳಿಗೆ ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ, ಮೆಡಿಕಲ್, ಆಪ್ಟಿಕಲ್ ಹಾಗೂ ಶಸ್ತ್ರ ಚಿಕಿತ್ಸೆ ಸಲಕರಣೆಗೆ ಭಾರತ, ಬ್ರೆಜಿಲ್ ಮತ್ತು ಕೊಲಂಬಿಯಾ ರಾಷ್ಟ್ರಗಳಿಂದ ಪೂರೈಸಲು ತೀರ್ಮಾನಿಸಲಾಗಿದೆ.

ಹೀಗೆ ಪ್ರತಿ ಅಗತ್ಯ ವಸ್ತುಗಳ ಪೂರೈಕೆಗೆ ಚೀನಾಗೆ ಪರ್ಯಾಯ ರಾಷ್ಟ್ರಗಳ ಹುಡುಕಾಟ ನಡೆಯುತ್ತಿವೆ.

Leave a Reply