ಏಕತೆ, ಶಾಂತಿ, ಸದ್ಭಾವನೆ ಕಾಪಾಡಲು ಬಿಜೆಪಿ ನಾಯಕರಿಗೆ ಮೋದಿ ಸೂಚನೆ!

ಡಿಜಿಟಲ್ ಕನ್ನಡ ಟೀಮ್:

ಪಕ್ಷದ ನಾಯಕರ ದ್ವೇಷದ ಮಾತುಗಳಿಂದ ಪಕ್ಷಕ್ಕೆ ರಾಷ್ಟ್ರಮಟ್ಟದಲ್ಲಿ ಮುಖಭಂಗವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಸಂಸದರು ಏಕತೆ, ಶಾಂತಿ ಹಾಗೂ ಸದ್ಭಾವನೆ ಕಾಪಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ತನ್ನ ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ.

ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ಪ್ರಧಾನಿ ಮೋದಿ, ಸಂಸದರಿಗೆ ನಿರ್ದೇಶನ ನೀಡಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಈ ವೇಳೆ ಅವರು ಹೇಳಿದ್ದಿಷ್ಟು…

‘ದೇಶದ ಹಿತಕ್ಕೆ ಶಾಂತಿ ಹಾಗೂ ಏಕತೆ ಅಗತ್ಯವಾಗಿದೆ. ದೇಶದ ಹಿತ ಹಾಗೂ ವಿಕಾಸ ನಮ್ಮ ಪ್ರಮುಖ ಆದ್ಯತೆಯಾಗಿದೆ. ಇದು ಕೇವಲ ಮಾತಿಗೆ ಸೀಮಿತವಾಗ ಬಾರದು. ಹೀಗಾಗಿ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಸಂಸದರು ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶದ ಹಿತಕ್ಕಾಗಿ ವಂದೇ ಮಾತರಂ ಅನ್ನು ಪರಿಚಯಿಸಲಾಯಿತು. ಈಗಿನ ಸಂದರ್ಭದಲ್ಲಿ ಭಾರತ ಮಾತಾಕಿ ಜೈ ಘೋಷವನ್ನು ಬಳಸಲು ಪಕ್ಷದ ನಾಯಕರಿಗೆ ತಿಳಿಸಲಾಗಿದೆ.’

Leave a Reply