ಐಪಿಎಲ್ ಪ್ರಶಸ್ತಿ ಮೊತ್ತದಲ್ಲಿ ಭಾರಿ ಬದಲಾವಣೆ! ಈ ಬಾರಿ ಚಾಂಪಿಯನ್ನರಿಗೆ ಸಿಗೋದೆಷ್ಟು?

ಡಿಜಿಟಲ್ ಕನ್ನಡ ಟೀಮ್:

ಜಾಗತಿಕ ಆರ್ಥಿಕ ಹಿಂಜರಿತದ ಬಿಸಿ ಕ್ರಿಕೆಟ್ ಗೆ ತಗುಲಿದ್ದು, ಪರಿಣಾಮ ಬಿಸಿಸಿಐ ಈಗ ವೆಚ್ಚದ ಹೊರೆ ಕಡಿಮೆ ಮಾಡಿಕೊಳ್ಳುವತ್ತ ಗಮನ ಹರಿಸಿದೆ. ಹೀಗಾಗಿ ಈ ಬಾರಿ ಐಪಿಎಲ್ ಟೂರ್ನಿಯ ಪ್ರಶಸ್ತಿ ಮೊತ್ತಕ್ಕೆ ಕತ್ತರಿ ಹಾಕಿದೆ.

ವರದಿಗಳ ಪ್ರಕಾರ ಬಿಸಿಸಿಐ ಶೇ.50 ವೆಚ್ಚ ಕಡಿತಕ್ಕೆ ಮುಂದಾಗಿದ್ದು, ಐಪಿಎಲ್ ಪ್ಲೇ ಆಫ್ ತಂಡಗಳಿಗೆ ನೀಡಲಾಗುತ್ತಿದ್ದ ಮೊತ್ತವನ್ನು ಅರ್ಧಕ್ಕೆ ಇಳಿಸಿದೆ. ಪರಿಣಾಮ ಕಳೆದ ಬಾರಿ ಚಾಂಪಿಯನ್ ತಂಡ 20 ಕೋಟಿ ರೂಪಾಯಿ ಪ್ರಶಸ್ತಿ ಮೊತ್ತ ಪಡೆದರೆ ಈ ಬಾರಿ 10 ಕೋಟಿ ರೂಪಾಯಿ ಪಡೆಯಲಿದೆ. ಇನ್ನು ರನ್ನರ್ ಅಪ್ ತಂಡ 12.50 ಕೋಟಿ ಬದಲಿಗೆ 6.25 ಕೋಟಿ ಪಡೆಯಲಿದೆ. ಉಳಿದ ಎರಡು ಪ್ಲೇ ಆಫ್ ತಂಡಗಳು ತಲಾ 4.37 ಕೋಟಿ ಪಡೆಯಲಿವೆ.

ಇದೇ ವೇಳೆ ಕ್ರೀಡಾಂಗಣ ಆತಿಥ್ಯ ಶುಲ್ಕ ಹೆಚ್ಚಿಸಲಾಗಿದ್ದು, ಇಷ್ಟು ದಿನಗಳ ಕಾಲ ಪ್ರತಿ ಫ್ರಾಂಚೈಸಿ ತಮ್ಮ ಪಂದ್ಯಗಳ ಆತಿಥ್ಯ ವಹಿಸುವ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಪ್ರತಿ ಪಂದ್ಯಕ್ಕೆ 30 ಲಕ್ಷ ಪಾವತಿ ಮಾಡುತ್ತಿದ್ದು, ಈಗ 20 ಲಕ್ಷ ಏರಿಕೆಯೊಂದಿಗೆ 50 ಲಕ್ಷ ಪಾವತಿಸಬೇಕು. ಬಿಸಿಸಿಐ ಕೂಡ ಇದೇ ಪ್ರಮಾಣದ ಹಣವನ್ನು ರಾಜ್ಯ ಸಂಸ್ಥೆಗಳಿಗೆ ನೀಡಲಿದ್ದು, ಇದರೊಂದಿಗೆ ಪಂದ್ಯದ ಆತಿಥ್ಯ ವಹಿಸುವ ರಾಜ್ಯ ಸಂಸ್ಥೆಗಳು 1 ಪಂದ್ಯಕ್ಕೆ 1 ಕೋಟಿ ಪಡೆಯಲಿವೆ.

Leave a Reply