ಚಂದನವನದ ಮೇಲೆ ಕೊರೋನಾ ಎಫೆಕ್ಟ್‌?

ಡಿಜಿಟಲ್ ಕನ್ನಡ ಟೀಮ್:

ಕನ್ನಡ ಚಿತ್ರಗಳಿಗೂ ಮಹಾಮಾರಿ ಕೊರೋನಾ ದಾಳಿ ಮಾಡಿದೆ. ಹಲವು ಚಿತ್ರಗಳು ಸರಿಯಾದ ಸಮಯಕ್ಕೆ ಬಿಡುಗಡೆ ಆಗಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ. ನಟ ಪುನೀತ್‌ ರಾಜ್‌ ಕುಮಾರ್‌ ಅಭಿನಯದ ಯುವರತ್ನ ಚಿತ್ರದ ಸಾಂಗ್‌ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಲು ತಯಾರಿ ಮಾಡಿಕೊಂಡಿದ್ದ ಚಿತ್ರತಂಡಕ್ಕೆ ಕೊರೋನಾ ವೈರಸ್‌ ಬ್ರೇಕ್ ಹಾಕಿದೆ.

ಇಡೀ ಚಿತ್ರತಂಡಕ್ಕೆ ಇದೀಗ ಕೊರೋನಾ ಭಯ ಶುರುವಾಗಿದೆ. ವಿದೇಶದಲ್ಲಿದ್ದ ಚಿತ್ರದ ಶೂಟಿಂಗ್ ಮುಂದೂಡಿಕೆ ಮಾಡಲಾಗಿದೆ. ಯುವರತ್ನ ಟೀಂ ಕಳೆದ ಸೋಮವಾರವೇ ಸ್ಲೋವೇನಿಯಾಗೆ ಹೋಗಬೇಕಿತ್ತು. ಆದರೆ ಕೊರೋನಾ ವೈರಸ್‌ ಭೀತಿಯಿಂದ ಶೂಟಿಂಗ್​ ಮುಂದೂಡಲಾಗಿದೆ. ಸ್ವತಃ ಪುನೀತ್‌ ರಾಜ್‍ಕುಮಾರ್ ಯುವರತ್ನ ಚಿತ್ರದ ಹಾಡನ್ನು ನಿಧಾನವಾಗಿ ಶೂಟ್‌ ಮಾಡೋಣ ಎಂದಿದ್ದಾರೆ ಎನ್ನಲಾಗಿದೆ.

ಸಂತೋಷ್ ಆನಂದ್‍ರಾಮ್ ನಿರ್ದೇಶಿಸುತ್ತಿರುವ ಈ ಸಿನಿಮಾದ ಹಾಡಿನ ಚಿತ್ರೀಕರಣಕ್ಕೆ 5 ದಿನಗಳ ಕಾಲ ವಿದೇಶಕ್ಕೆ ತೆರಳಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ಇದೀಗ ಕೊರೋನಾ ಭೀತಿಯಿಂದ 1 ತಿಂಗಳ ಕಾಲ ಶೂಟಿಂಗ್ ಮುಂದೂಡಿಕೆ ಮಾಡಲಾಗಿದೆ. ಇದ್ರಿಂದ ಯುವರತ್ನ ಸಿನಿಮಾ ರಿಲೀಸ್ ಕೂಡ ತಡವಾಗುವ ಸಾಧ್ಯತೆ ದಟ್ಟವಾಗಿದೆ.

ಇನ್ನು ಸ್ಯಾಂಡಲ್​ವುಡ್​ನ ಮೋಸ್ಟ್​ ಎಕ್ಸ್​​ಪೆಕ್ಟೆಡ್​ ಸಿನಿಮಾ ರಾಬರ್ಟ್​ಗೂ ಕೊರೋನಾ ವೈರಸ್‌ ಎಫೆಕ್ಟ್ ತಟ್ಟಿದೆ. ಚಾಲೆಂಜಿಂಗ್‌ ಸ್ಟಾರ್‌ ರ್ಶನ್ ಅಭಿನಯದ ರಾಬರ್ಟ್​ ಸಿನಿಮಾ ಶೂಟಿಂಗ್​ಗೂ ತಾತ್ಕಾಲಿಕ ಬ್ರೇಕ್‌ ಬಿದ್ದಿದೆ. ದರ್ಶನ್​ ಅಭಿನಯದ ರಾಬರ್ಟ್ ಸಿನಿಮಾದ ಹಾಡುಗಳ ಚಿತ್ರೀಕರಣಕ್ಕೆ ವಿದೇಶಕ್ಕೆ ತೆರಳಬೇಕಿತ್ತು. ವಿದೇಶದಲ್ಲಿ ಶೂಟ್‌ ಮಾಡಬೇಕಿದ್ದ ಹಾಡಿನ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಮಾರ್ಚ್‌ 2 ರಿಂದ ಸ್ಪೇನ್​ನಲ್ಲಿ ಶೂಟಿಂಗ್ ಮಾಡಲು ಶೆಡ್ಯೂಲ್ ಫಿಕ್ಸ್‌ ಮಾಡಲಾಗಿತ್ತು. ಆದರೆ ಇದೀಗ ವಿದೇಶ ಹೊರತುಪಡಿಸಿ ಬೇರೆ‌ ಲೊಕೇಷನ್​ನಲ್ಲಿ ಶೂಟಿಂಗ್​ ಮಾಡಲು ಚಿತ್ರತಂಡ ಚಿಂತನೆ ಮಾಡುತ್ತಿದೆ ಎನ್ನಲಾಗ್ತಿದೆ.

ಮಾರ್ಚ್ 8 ರಿಂದ ಹೊಸ ಲೊಕೇಷನ್​‌ನಲ್ಲಿ‌ ಶೂಟಿಂಗ್​ ನಡೆಯಲಿದೆ ಎಂದು ಮೂಲಗಳು ಹೇಳಿಕೊಂಡಿವೆ. ಆದರೆ ಇನ್ನೂ ಕೂಡ ಯಾವ ಲೊಕೇಷನ್‌ನಲ್ಲಿ ಚಿತ್ರೀಕರಣ ಮಾಡಬೇಕು ಎನ್ನುವುದು ಅಂತಿಮವಾಗಿಲ್ಲ. ದರ್ಶನ್ ಹಾಗು ಆಶಾ ಭಟ್ ನಡುವಿನ ಡ್ಯೂಯೆಟ್ ಸಾಂಗ್ ಚಿತ್ರೀಕರಣ ಬಾಕಿ ಇದೆ ಎನ್ನಲಾಗಿದೆ.

ಏಪ್ರಿಲ್ 9ರಂದು ಚಿತ್ರದ ಬಿಡುಗಡೆಗೆ ಸಿದ್ದತೆಗಳು ಭರದಿಂದ ಸಾಗಿವೆ. ಆದರೆ ಸಾಂಗ್‌ ಶೂಟಿಂಗ್‌ ಆಗದ ಹೊರತು ಚಿತ್ರ ಬಿಡುಗಡೆ ಕಷ್ಟಸಾಧ್ಯ.

Leave a Reply